ಕುಳಿ ಬಿದ್ದಿರುವ ಮೇಲ್ಸೇತುವೆ
ನವದೆಹಲಿ: ಗುರುಗ್ರಾಮದ ರಾಮಪುರ ಮೇಲ್ಸೇತುವೆ ನಿರ್ಮಿಸಿ ಇನ್ನೂ ವರ್ಷ ಕೂಡ ಕಳೆದಿಲ್ಲ ಆಗಲೇ ಬರೊಬ್ಬರಿ 4 ಅಡಿ ಅಗಲದ ಕುಳಿ ಬಿದಿದ್ದು ಕಳಪೆ ಕಾಮಗಾರಿಗೆ ಹಿಡಿದ ಸ್ಪಷ್ಟ ನಿದರ್ಶನವಾಗಿದೆ.
ಈ ಕಾಮಗಾರಿಯನ್ನು ಕಳಪೆ ಕಾಮಗಾರಿಗಳ ರಾಜ ಎನ್ನಬಹುದು. ಏಕೆಂದರೆ ಮೇಲ್ಸೇತುವೆ ಲೋಕಾರ್ಪಣೆಯಾಗಿ ವರ್ಷಪೂರ್ಣಗೊಳ್ಳುವದರೊಳಗೇ ಸೇತುವೆಯಲ್ಲಿ ಕುಳಿ ಕಾಣಿಸಿಕೊಂಡಿದೆ. ಗುರುಗಾಂವ್ ನ ರಾಮಪುರ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಖೆರ್ಕಿ ಡೌಲಾ ಟೋಲ್ ಪ್ಲಾಜಾ ಮತ್ತು ಐಎಮ್ ಟಿ ಮಾನೇಸರ್ ನಡುವಿನ ಸಂಪರ್ಕ ಸೇತುವೆ ಇದಾಗಿದ್ದು, ಕುಳಿಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 8ರಲ್ಲಿ ವ್ಯಾಪಕ ಟ್ರಾಫಿಕ್ ಜಾಮ್ ಉಂಟಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕುಳಿಯ ಕುರಿತು ನಮಗೆ ಮಾಹಿತಿ ಬಂದಿದೆ. ಕೂಡಲೇ ಅಧಿಕಾರಿಗಳನ್ನು ಎಂಜಿನಿಯರ್ ಗಳನ್ನು ಘಟನಾ ಸ್ಥಳಕ್ಕೆ ರವಾನಿಸಿದ್ದೇವೆ. ಶೀಘ್ರ ದುರಸ್ತಿ ಕಾಮಗಾರಿ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.