ರಾಮ್ ವಿಲಾಸ್ ಪಾಸ್ವನ್ 
ದೇಶ

ಸೀಟು ಹಂಚಿಕೆ ವಿಚಾರದಲ್ಲಿ ಅಸಮಾಧಾನ ಇಲ್ಲ- ರಾಮ್ ವಿಲಾಸ್ ಪಾಸ್ವನ್

ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ಹಾಗೂ ಎಲ್ ಜೆಪಿ ನಡುವೆ ಯಾವುದೇ ಅಸಮಾಧಾನವಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವನ್ ಹೇಳಿದ್ದಾರೆ

ನವದೆಹಲಿ: ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ಹಾಗೂ ಎಲ್ ಜೆಪಿ ನಡುವೆ ಯಾವುದೇ ಅಸಮಾಧಾನವಿಲ್ಲ ಎಂದು ಕೇಂದ್ರ  ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವನ್ ಹೇಳಿದ್ದಾರೆ.

ಈ ವಿಚಾರದಲ್ಲಿ ಯಾವುದೇ ಭಿನ್ನಮತವಿಲ್ಲ, ಚಿರಾಗ್  ಎಲ್ ಜೆಪಿ ಸಂಸದೀಯ ಮಂಡಳಿ ಅಧ್ಯಕ್ಷನಾಗಿದ್ದು, ಈ ವಿಚಾರದ ಬಗ್ಗೆ ಆತ  ಮಾತುಕತೆ ನಡೆಸುವುದಾಗಿ ಹೇಳಿದರು.

ಸೀಟು ಹಂಚಿಕೆ ಸಂಬಂಧ  ರಾಮ್ ವಿಲಾಸ್ ಪಾಸ್ವನ್ ಪುತ್ರ ಹಾಗೂ ಸಂಸದ ಚಿರಾಗ್ ಪಾಸ್ವನ್ ಸಾರ್ವಜನಿಕವಾಗಿ ತನ್ನ ಅಭಿಪ್ರಾಯ ಹಂಚಿಕೊಂಡ ನಂತರ ಎನ್ ಡಿಎ ಹಾಗೂ ಲೋಕ ಜನಾಶಕ್ತಿ ಪಾರ್ಟಿ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತಹ ಮಾತುಗಳು ಕೇಳಿಬರುತ್ತಿದ್ದವು.

ಈ  ಬಗ್ಗೆ  ರಾಮ್ ವಿಲಾಸ್ ಪಾಸ್ವನ್ ಸ್ಪಷ್ಟನೆ ನೀಡಿದ್ದಾರೆ.  ಬಿಜೆಪಿ ರಾಮಮಂದಿರದಂತಹ ಅನಗತ್ಯ ವಿಷಯಗಳಿಗೆ ಗಮನ ನೀಡುತ್ತಿದೆ. ಅಭಿವೃದ್ದಿಯಂತಹ ನೈಜ ವಿಷಯಗಳನ್ನು ಬಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಚಿರಾಗ್ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.

 ಪಾಸ್ವಾನ್ ಹಾಗೂ ಚಿರಾಗ್  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂಬುದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮಮಂದಿರ ಬಳಿಕ ಬದರಿನಾಥ ದೇವಾಲಯದಲ್ಲೂ ದೇಣಿಗೆ ಕಳ್ಳತನ ಆರೋಪ, ತನಿಖೆಗೆ ಆದೇಶ!

ಸದ್ಯದಲ್ಲೇ ಮೋದಿ ಸಂಪುಟ ಪುನರ್ ರಚನೆ: ಅಮಿತ್ ಶಾಗೆ ಉಪ ಪ್ರಧಾನಿ ಪಟ್ಟ? ವರದಿಗಳು

New Aadhaar App ಮೂಲಕ ಮೊಬೈಲ್ ನಂಬರ್, ಇ-ಮೇಲ್ update ಗೆ ಅವಕಾಶ: 6 ತಿಂಗಳ ವರೆಗೆ ಸೌಲಭ್ಯ ಉಚಿತ!

ಪಾರ್ಟಿ ನೆಪದಲ್ಲಿ ಬೆಂಗಳೂರಿನಲ್ಲಿ ಯುವತಿಯ ಮೇಲೆ ಅತ್ಯಾಚಾರ : ಐವರು ಆರೋಪಿಗಳ ಬಂಧನ!

UAPA: ಪಾಕಿಸ್ತಾನ ಮೂಲದ 23 ಉಗ್ರ ಕಾರ್ಯಕರ್ತರು ಭಯೋತ್ಪಾದಕರೆಂದು ಕೇಂದ್ರ ಸರ್ಕಾರ ಘೋಷಣೆ