ರಾಜನಾಥ್ ಸಿಂಗ್ ಅವರಿಂದ ಪೊಲೀಸರಿಗೆ ಸನ್ಮಾನ ಸಮಾರಂಭ
ನವದೆಹಲಿ: ಭಾರತದ 10 ಉತ್ತಮ ಪೊಲೀಸ್ ಠಾಣೆಗಳಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಪುದುಚೆರಿಯ ಪೊಲೀಸ್ ಠಾಣೆಗಳು ಸ್ಥಾನ ಪಡೆದುಕೊಂಡಿವೆ.
ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಭಾರತದ ಉತ್ತಮವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಠಾಣೆಗಳಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ ಗುಡೇರಿ ಪೊಲೀಸ್ ಠಾಣೆ 5ನೇ ಸ್ಥಾನ ಪಡೆದಿದೆ.
ರಾಜಸ್ತಾನ- ಕಾಲು, ಅಂಡಮಾನ್ ನಿಕೋಬಾರ್ -ಕ್ಯಾಂಪ್ ಬೆಲ್ ಬೇ, ಪಶ್ಚಿಮ ಬಂಗಾಳ- ಫಾರಕ್ಕಾ, ಪುದುಚೆರಿ-ನೆಟ್ಟಪಾಕಂ, ಕರ್ನಾಟಕ- ಗುಡೇರಿ, ಹಿಮಾಚಲ ಪ್ರದೇಶ-ಚೋಪಾಲ್, ಲಖೇರಿ- ರಾಜಸ್ತಾನ, ಪೆರಿಯಾಕುಲಂ- ತಮಿಳುನಾಡು, ಮುನ್ಸಾರಿ-ಉತ್ತರ ಖಂಡ, ಚುರ್ ಚೋರಂ-ಗೋವಾ ಉತ್ತಮ ಪೊಲೀಸ್ ಠಾಣೆಗಳೆಂದು ಹೆಸರು ಪಡೆದಿವೆ.
ಗುಜರಾತ್ ನಲ್ಲಿ ನಡೆಯುತ್ತಿರುವ ಡಿಜಿಪಿ ಮತ್ತು ಐಜಿಪಿಗಳ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಟ್ಟಿ ಬಿಡುಗಡೆ ಮಾಡಿದ್ದಾರೆ, ಭಾರತದ ಪ್ರಮುಖ 10 ಪೊಲೀಸ್ ಠಾಣೆಗಳಲ್ಲಿ ಗುಜರಾತ್ ನ ಯಾವುದೇ ಒಂದು ಠಾಣೆ ಸ್ಥಾನ ಪಡೆದುಕೊಂಡಿಲ್ಲ.
ಮೊದಲ ಮೂರು ಉತ್ತಮ ಪೊಲೀಸ್ ಠಾಣೆ ಅಧಿಕಾರಿಗಳಿಗೆ ರಾಜನಾಥ್ ಸಿಂಗ್ ಟ್ರೋಫ್ ನೀಡಿ ಗೌರವಿಸಿದರು.
ಉತ್ತಮವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಠಾಣೆಗಳ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿ, ಪಟ್ಟಿ ಸಿದ್ದಪಡಿಸಿದೆ. ಈ ಪಟ್ಟಿಯಿಂದ ಗ್ರಾಮೀಣ ಭಾಗದ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುಲನ ಉತ್ಸುಕತೆ ಹೆಚ್ಚುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics