ಉತ್ತರ ಪ್ರದೇಶ: ಐಪಿಎಸ್ ಕನಸು ಹೊತ್ತಿದ್ದವಳು ಬೆಂಕಿಯಲ್ಲಿ ಸುಟ್ಟು ಬೂದಿಯಾದಳು!
ಆಗ್ರಾ: ತಾನು ಮುಂದೆ ಚೆನ್ನಾಗಿ ಓದಿ ಐಪಿಎಸ್ ಅಧಿಕಾರಿಯಾಗುವ ಮೂಲಕ ದೇಶಸೇವೆ ಮಾಡಬೇಕೆಂದುಕೊಂಡಿದ್ದ 15ರ ಬಾಲಕಿಯೊಬ್ಬಳನ್ನು ಇಬ್ಬರು ದುಷ್ಕರ್ಮಿಗಳು ಸೇರಿ ಸಜೀವವಾಗಿ ಸುಟ್ಟಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಆಗ್ರಾ ಜಿಲ್ಲೆ ನುಮೀಲ್ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಸಂಜಾಲಿ, ಅಶಾರ್ಫಿ ಎಂಬ ದಲಿತ ಬಾಲಕಿ ಬೆಂಕಿಗಾಹುತಿಯಾಗಿ ಮರಣಿಸಿದ್ದಾಳೆ.
ದೇವಿ ಚಡ್ಡಾ ಸಿಂಗ್ ಇಂಟರ್ ಕಾಲೇಜಿನಲ್ಲಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಮಂಗಳವಾರ ಎಂದಿನಂತೆ ಶಾಲೆಯಿಂದ ಮನೆಗೆ ಮರಳುತ್ತಿರುವಾಗ ಎದುರಾದ ಇಬ್ಬರು ದುಷ್ಕರ್ಮಿಗಳು ಅವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದ ಸುಟ್ಟು ಗಂಭೀರ ಗಾಯಗೊಂಡಿದ್ದ ಆಕೆಯನ್ನು ಎಸ್ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸ್ ಚಿಕಿತ್ಸೆ ಒದಗಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಭಾಲಕಿ ಕೊನೆಯುಸಿರೆಳೆದಿದ್ದಾಳೆ.
ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. "ನಾವು ದಲಿತರು, ಆದರೆ ಗ್ರಾಮದಲ್ಲಿ ಯಾರೊಡನೆ ವೈರತ್ವ ಹೊಂದಿರಲಿಲ್ಲ. ಮಗಳು ಐಪಿಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದಳು, ಈಗ ಸುಟ್ಟು ಭಸ್ಮವಾಗಿದ್ದಾಳೆ, ನಮಗೆ ನ್ಯಾಯ ದೊರಕಬೇಕು" ಎಂದು ಮೃತ ಬಾಲಕಿಯ ತಾಯಿ ಹೇಳಿದ್ದಾರೆ.
ಘಟನೆ ನಡೆದು ದಿನಗಳೇ ಕಳೆದರೂ ಅಪರಾಧಿಗಳ ಸುಳಿವು ಲಭ್ಯವಾಗಿಲ್ಲ, ಬಾಲಕಿಯ ಕುಟುಂಬಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics