ದೇಶ

ಅಕ್ಬರ್ ಕೋಟೆಯಲ್ಲಿ ಋಷಿ ಭಾರಧ್ವಾಜ, ಸರಸ್ವತಿ ಪ್ರತಿಮೆ ನಿರ್ಮಾಣ ಯೋಜನೆ ಘೋಷಿಸಿದ ಯೋಗಿ ಆದಿತ್ಯನಾಥ್!

Srinivas Rao BV
ಪ್ರಯಾಗ್ ರಾಜ್: ಅಕ್ಬರ್ ಕೋಟೆಗೆ ಹಿಂದೂಗಳಿಗೆ ಪ್ರವೇಶ ನೀಡುವುದಾಗಿ ಘೋಷಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕೋಟೆಯಲ್ಲಿ ಋಷಿ ಭಾರಧ್ವಾಜ, ಸರಸ್ವತಿ ಪ್ರತಿಮೆ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. 
ಪ್ರಯಾಗ್ ರಾಜ್ ನಲ್ಲಿರುವ ಅಕ್ಬರ್ ಕೋಟೆಯಲ್ಲಿರುವ ಅಕ್ಷಯವತ್ ಹಾಗೂ ಸರಸ್ವತಿ ಕೂಪ್ ಗೆ ಹಿಂದೂಗಳಿಗೆ ಪ್ರವೇಶ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದು, ಕುಂಭಮೇಳ ಪ್ರಾರಂಭವಾದ ಬೆನ್ನಲ್ಲೇ ಯಾತ್ರಾರ್ಥಿಗಳು ಎರಡೂ ಪ್ರದೇಶಗಳಿಗೆ ತೆರಳಬಹುದು ಎಂದು ಹೇಳಿದ್ದಾರೆ. 
ಕೋಟೆಯ ಒಳಭಾಗದಲ್ಲಿ ಋಷಿ ಭಾರಧ್ವಾಜ ಹಾಗೂ ಸರಸ್ವತಿ ದೇವಿಯ ಪ್ರತಿಮೆ ನಿರ್ಮಾಣ ಮಾಡಲಾಗುವುದು, ಕುಂಭಮೇಳವಷ್ಟೇ ಅಲ್ಲದೇ ಸಾಮಾನ್ಯದ ದಿನಗಳಲ್ಲೂ ಹಿಂದೂಗಳು ಅಕ್ಬರ್ ಕೋಟೆಗೆ ತೆರಳಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಈ ವರೆಗೂ ಅಕ್ಬರ್ ಕೋಟೆಯಲ್ಲಿನ ಅಕ್ಷಯವತ್ ಹಾಗೂ ಸರಸ್ವತಿ ಕೂಪ್ ಗೆ ಹಿಂದೂಗಳ ಪ್ರವೇಶಕ್ಕೆ ಅನುಮತಿ ಸಿಕ್ಕಿರಲಿಲ್ಲ. 
SCROLL FOR NEXT