ನಮಗೆ ಹೊಸ ಮೈತ್ರಿಪಕ್ಷಗಳು ಸಿಗುತ್ತಿವೆ: ರಾಮ್ ಮಾಧವ್
ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ತಯಾರಿ ನಡೆಯುತ್ತಿದೆ. ಎನ್ ಡಿಎ ಜೊತೆಗಿರುವ ಮಿತ್ರಪಕ್ಷಗಳಲ್ಲಿ ಶಿವಸೇನೆ ಸೇರಿದಂತೆ ಕೆಲವು ಪಕ್ಷಗಳು ಬಿಜೆಪಿ ವಿರುದ್ಧ ಸ್ವಲ್ಪ ಅಸಮಾಧಾನಗೊಂಡಿವೆ. ಆದರೂ ಬಿಜೆಪಿ ಹೊಸ ಮೈತ್ರಿ ಪಕ್ಷಗಳನ್ನು ಪಡೆಯುತ್ತಿರುವುದಾಗಿ ಹೇಳಿದೆ.
ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮಾತನಾಡಿದ್ದು, ನಮಗೆ ಹೊಸ ಮೈತ್ರಿಪಕ್ಷಗಳು ಸಿಗುತ್ತಿವೆ ಎಂದು ಹೇಳಿದ್ದಾರೆ. ಬಿಹಾರದಲ್ಲಿ ನಾವು ಕಳೆದ ವಾರವಷ್ಟೇ ಮಿತ್ರಪಕ್ಷಗಳೊಂದಿಗಿನ ಸ್ಥಾನ ಹಂಚಿಕೆ ವಿಷಯವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿರುವುದಾಗಿ ರಾಮ್ ಮಾಧವ್ ಹೇಳಿದ್ದಾರೆ. ರಾಜಕೀಯದಲ್ಲಿ ಮೈತ್ರಿ ಎಂದರೆ ಹಂಚಿಕೆ ಹಾಗೂ ಹೊಂದಾಣಿಕೆಯಷ್ಟೇ. ಬಿಹಾರದಲ್ಲಿ ಆರ್ ಎಲ್ಎಸ್ ಪಿಯಂತಹ ಸಣ್ಣ ಪಕ್ಷಗಳು ಎನ್ ಡಿಎ ಬಿಟ್ಟು ಹೋಗಿರುವುದು ನಿಜ ಆದರೆ ನಮಗೆ ಹೊಸ ಮಿತ್ರಪಕ್ಷಗಳೂ ಸಹ ಸಿಗುತ್ತಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics