ನವದೆಹಲಿ: ಹೊಸ ಕೇಬಲ್ ನೀತಿಯ ಜಾರಿಯ ಕಾರಣ ಡಿಸೆಂಬರ್ 29ರ ಬಳಿಕ ಟಿವಿ ಚಾನಲ್ ಪ್ರಸಾರದಲ್ಲಿ ವ್ಯತ್ಯಯವಾಗಲಿದೆ ಎಂಬ ಊಹಾಪೋಹಗಳಿಗೆ ಭಾರತೀಯ ಟೆಲಿಕಾಂ ನಿಯಂತ್ರಣಾ ಸಂಸ್ಥೆ (ಟ್ರಾಯ್) ತೆರೆ ಎಳೆದಿದೆ.
ಡಿಸೆಂಬರ್ 29ರ ನಂತರವೂ ಕೇಬಲ್ ಟಿವಿ ಚಾನಲ್ ಗಳ ಪ್ರಸಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದಿರುವ ಟ್ರಾಯ್ ಈ ಕುರಿತಂತೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ. "ಈ ವರ್ಷಾಂತ್ಯದ ಬಳಿಕವೂ ಟಿವಿ ಪ್ರಸಾರದಲ್ಲಿ ಯಾವ ವ್ಯತ್ಯಯವಾಗುವುದಿಲ್ಲ, ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಗ್ರಾಹಕರಿಗೆ ಸಮಯಾವಕಾಶ ಹಾಗೂ ಸೂಕ್ತ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಟ್ರಾಯ್ ಹೇಳಿದೆ.
"ಡಿ.29ರ ಬಳಿಕ ಟಿವಿ ಚಾನಲ್ ಗಳು ಕಣ್ಮರೆಯಾಗಲಿದೆ ಎನ್ನುವುದಾಗಿ ಹಾವಾರು ಮಾದ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದು ಇದು ಸುಳ್ಳು, ಹೊಸ ನೀತಿಯಿಂದಾಗಿ ಟಿವಿ ಸೇವೆಯಲ್ಲಿ ಯಾವ ಬದಲಾವಣೆ ಆಗುವುದಿಲ್ಲ.ಯಾವುದೇ ಚಾನಲ್ ಗಳು ರದ್ದಾಗುಉವುದಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸುತ್ತೇವೆ" ಟ್ವೀಟ್ ನಲ್ಲಿ ಹೇಳಲಾಗಿದೆ.