ನವದೆಹಲಿ: ಸಾವಿರಾರು ಕೋಟಿ ರು. ಬ್ಯಾಂಕ್ ವಂಚನೆ ನಡೆಸಿ ದೇಶ ಬಿತ್ಟು ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಬ್ರಿಟನ್ ನಲ್ಲಿ ಪತ್ತೆಯಾಗಿದ್ದಾನೆ.ನೀರವ್ ಮೋದಿ ಯುನೈಟೆಡ್ ಕಿಂಗ್ ಡಮ್ ನಲ್ಲಿ ವಾಸವಿದ್ದಾನೆ ಎಂದು ಬ್ರಿಟಿಷ್ ಅಧಿಕಾರಿಗಳು ಬಾರತ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಮ್ಯಾಂಚೆಸ್ಟರ್ ರಾಷ್ಟ್ರೀಯ ತನಿಖಾಧಿಕಾರಿಗಳು ಯುಕೆನಲ್ಲಿ ನೀರವ್ ಮೋದಿ ಇದ್ದಾನೆ ಎಂದುಭಾರತಕ್ಕೆ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
"2018 ರ ಆಗಸ್ಟ್ ನಲ್ಲಿ ಸರ್ಕಾರವು ನೀರವ್ ಮೋದಿ ಪತ್ತೆಗಾಗಿ ಎರಡು ಮಾರಿ ಮನವಿ ಸಲ್ಲಿಸಿದೆ. ಒಂದು ಸಿಬಿಐ ಮನವಿಯ್ತಾದರೆ ಇನ್ನೊಂದು ಜಾರಿ ನಿರ್ದೇಶನಾಲಯ (ಇಡಿ) ಮನವಿಯಾಗಿತ್ತು.ಈ ಎರಡೂ ಸಂಸ್ಥೆಯ ಅಧಿಕಾರಿಗಳು ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಕೋರಿದ್ದರು" ಎಂದು ಸಿಂಗ್ ರಾಜ್ಯಸಭೆಗೆ ತಿಳಿಸಿದರು
ಈ ತಿಂಗಳ ಪ್ರಾರಂಭದಲ್ಲಿಕಾಂಗ್ರೆಸ್ ಪಕ್ಷವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತ್ದಿಂದ ನೀರವ್ ಮೋದಿ ಪರಾರಿಯಾಗಿಉವ ಮಾಹಿತಿಯನ್ನು ಮೊದಲೇ ಪಡೆದುಕೊಂಡಿದ್ದರು ಎಂದು ಆರೋಪಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics