ಸಂಸತ್ ನಲ್ಲಿ ಈ ಮಸೂದೆ ಅಂಗೀಕಾರವಾದರೆ, ಕೆಲಸದ ಅವಧಿ ನಂತರ ಬಾಸ್, ಕಚೇರಿಯಿಂದ ಕರೆ, ಇ-ಮೇಲ್ ಬರಲ್ಲ!
ನವದೆಹಲಿ: ಎಷ್ಟೋ ಬಾರಿ ಕೆಲಸದ ನಂತರವೂ ಕಚೇರಿಯಿಂದ ಇ-ಮೇಲ್ ಅಥವಾ ಕರೆ ಬರುವ ಉದಾಹರಣೆಗಳಿವೆ. ಆದರೆ ಸಂಸತ್ ನಲ್ಲಿ ಇದೊಂದು ಮಸೂದೆ ಮಂಡನೆಯಾಗಿ ಅಂಗೀಕಾರಗೊಂಡರೆ, ಅವೆಲ್ಲದರಿಂದ ಶೀಘ್ರವೇ ಮುಕ್ತಿ ಸಿಗಲಿದೆ.
ಎನ್ ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರ ಖಾಸಗಿ ಮಸೂದೆಯೊಂದು ನೌಕರರ ಕಲ್ಯಾಣ ಪ್ರಾಧಿಕಾರ ರಚನೆಗೆ ಆಗ್ರಹಿಸಿದೆ. ಈ ಮಸೂದೆ ಅಂಶಗಳು ಜಾರಿಗೊಂಡರೆ, ಕರ್ತವ್ಯದ ಅವಧಿಯ ನಂತರ ಅಥವಾ ರಜೆ ದಿನಗಳಲ್ಲಿ ಕಚೇರಿಯಿಂದ ಇ-ಮೇಲ್ ಹಾಗೂ ಕರೆಗಳನ್ನು
ಯಾವುದೇ ನೌಕರ ಮುಲಾಜಿಲ್ಲದೇ ತಿರಸ್ಕರಿಸಲು ಸಾಧ್ಯವಿದೆ.
ಭಾರತದ ಸಂಸತ್ ಇತಿಹಾಸದಲ್ಲಿ ಈ ವರೆಗೆ ಕೇವಲ 5 ಖಾಸಗಿ ಮಸೂದೆಗಳು ಅಂಗೀಕಾರಗೊಂಡಿದ್ದು ಈ ಮಸೂದೆ ಖಾಸಗಿ ಮಸೂದೆಯಾಗಿರುವ ಹಿನ್ನೆಲೆಯಲ್ಲಿ ಅಂಗೀಕಾರವಾಗುವ ಸಾಧ್ಯತೆಗಳು ತೀರಾ ಕಡಿಮೆ ಇದೆ.