ಒಡಿಶಾ: ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋದ ವಿದ್ಯಾರ್ಥಿ ನೀರುಪಾಲು!' 
ದೇಶ

ಒಡಿಶಾ: ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋದ ವಿದ್ಯಾರ್ಥಿ ನೀರುಪಾಲು!'

ಜಲಪಾತ ವೀಕ್ಷಣೆಗಾಗಿ ತೆರಳಿದ್ದ ವಿದ್ಯಾರ್ಥಿ ಜಲಪಾತದ ಸಮೀಪ ಸೆಲ್ಫಿ (ಸ್ವಂತಿ) ಕ್ಲಿಕ್ಕಿಸಲು ಹೋಗಿ ನೀರಿಗೆ ಬಿದ್ದು ದಾರುಣ ಸಾವಿಗೀಡಾಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಭುವನೇಶ್ವರ: ಜಲಪಾತ ವೀಕ್ಷಣೆಗಾಗಿ ತೆರಳಿದ್ದ ವಿದ್ಯಾರ್ಥಿ ಜಲಪಾತದ ಸಮೀಪ ಸೆಲ್ಫಿ (ಸ್ವಂತಿ) ಕ್ಲಿಕ್ಕಿಸಲು ಹೋಗಿ ನೀರಿಗೆ ಬಿದ್ದು ದಾರುಣ ಸಾವಿಗೀಡಾಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಭೀಮಕುಂದಾ ಜಲಪಾತಕ್ಕೆ ಪ್ರವಾಸ ತೆರಳಿದ್ದ ವೇಳೆ  ರೋಹನ್ ಮಿಶ್ರಾ ಎಂಬ ವಿದ್ಯಾರ್ಥಿ ನೀರುಪಾಲಾಗಿದ್ದಾನೆ.
ರೋಹನ್  ಮಧುಪಟ್ನಾ ಸಾಯಿ ಶಿಕ್ಷಾ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದು ಗೆಳೆಯರೊಡಎ ಜಲಪಾತ ವೀಕ್ಷಣೆಗೆ ತೆರಳಿದ್ದಾನೆ. ಈ ವೇಳೆ ಎಲ್ಲರೊಡನೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಅಕಸ್ಮಾತ್ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಎಲ್ಲಾ ಗೆಳೆಯರ ಸಮ್ಮುಖದಲ್ಲೇ ಆತ ನೀರುಪಾಲಾಗಿದ್ದು ಇದನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ನೀರಿಗೆ ಬಿದ್ದ ರೋಹನ್  ನನ್ನು ಸ್ಥಳದಲ್ಲಿದ್ದ ಜನರು ರಕ್ಷಿಸಲು ಮುಂದಾಗಿದ್ದರಾದರೂ ನೀರಿನ ರಭಸದಿಂದಾಗಿ ಅದು ಸಾಧ್ಯವಾಗಿಲ್ಲ.
ಘಟನೆ ಸಂಬಂಧ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!