ಸಂಗ್ರಹ ಚಿತ್ರ 
ದೇಶ

ಭಾರತದ ಗಡಿಗೆ ಕಳುಹಿಸಲು ಪಾಕ್'ನಿಂದ 600 ಯುದ್ಧ ಟ್ಯಾಂಕ್ ಖರೀದಿ: ಗುಪ್ತಚರ ಮಾಹಿತಿ

ಭಾರತದ ಜೊತೆಗಿನ ಗಡಿಯಲ್ಲಿ ತನ್ನ ಶಕ್ತಿ-ಸಾಮರ್ಥ್ಯವನ್ನು ವೃದ್ಧಿಸಲು ಹೆಣಗಾಡುತ್ತಿರುವ ಪಾಕಿಸ್ತಾನ, ತನ್ನ ಸೇನೆಗೆ ಬಲ ತುಂಬುವ ಉದ್ದೇಶದಿಂದ 600 ಯುದ್ಧ ಟ್ಯಾಂಕ್ ಗಳನ್ನು ಖರೀದಿಸಲು ಯೋಜನೆಯೊಂದನ್ನು ರೂಪಿಸುತ್ತಿದೆ...

ನವದೆಹಲಿ: ಭಾರತದ ಜೊತೆಗಿನ ಗಡಿಯಲ್ಲಿ ತನ್ನ ಶಕ್ತಿ-ಸಾಮರ್ಥ್ಯವನ್ನು ವೃದ್ಧಿಸಲು ಹೆಣಗಾಡುತ್ತಿರುವ ಪಾಕಿಸ್ತಾನ, ತನ್ನ ಸೇನೆಗೆ ಬಲ ತುಂಬುವ ಉದ್ದೇಶದಿಂದ 600 ಯುದ್ಧ ಟ್ಯಾಂಕ್ ಗಳನ್ನು ಖರೀದಿಸಲು ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ. 
600 ಸಮರ ಟ್ಯಾಂಕ್ ಗಳ ಪೈಕಿ 360 ಟ್ಯಾಂಕ್ ಗಳನ್ನು ವಿದೇಶದಿಂದ ಹಾಗೂ 220 ಟ್ಯಾಂಕ್ ಗಳನ್ನು ಚೀನಾ ರಾಷ್ಟ್ರದ ನೆರವಿನೊಂದಿಗೆ ದೇಶೀಯವಾಗಿ ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಪಾಕಿಸ್ತಾನ ಹೊಂದಿದೆ ಎಂದು ತಿಳಿದುಬಂದಿದೆ. 
ಇದರೊಂದಿಗೆ ರಷ್ಯಾದ ಟಿ-90 ಯುದ್ಧ ಟ್ಯಾಂಕ್ ಗಳನ್ನೂ ಖೀರಿದಿಸಲು ಪಾಕಿಸ್ತಾನ ಚಿಂತನೆ ನಡೆಸಿದೆ ಎಂದು ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ. 
ಪಾಕಿಸ್ತಾನ ಖರೀದಿಸಲು ಉದ್ದೇಶಿಸುತ್ತಿರುವ ಟ್ಯಾಂಕ್ ಗಳನ್ನು 3-4 ಕಿ.ಮೀವರೆಗೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಯುದ್ಧ ಟ್ಯಾಂಕ್ ಗಳು ಮಾತ್ರವೇ ಅಲ್ಲದೆ ಇಟಲಿಯಿಂದ 245 '150' ಎಂಎಂ ಎಸ್'ಪಿ ಮೈಕ್-10 ಗನ್ ಗಳನ್ನು ಖರೀಸಲು ಪಾಕಿಸ್ತಾನ ನಿರ್ಧರಿಸಿದೆ. ಆ ಪೈಕಿ ಈಗಾಗಲೇ 120 ಗನ್ ಗಳು ಹಸ್ತಾಂತರವಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಭಾರತದ ಬಳಿ ಟಿ-90, ಟಿ-72 ಹಾಗೂ ಅರ್ಜುನ ಟ್ಯಾಂಕ್ ಗಳು ಇದ್ದು, ಪಾಕಿಸ್ತಾನದ ಟ್ಯಾಂಕ್ ಪಡೆಗೆ ಹೋಲಿಸಿದರೆ ಉತ್ಕೃಷ್ಟವಾಗಿವೆ. ಹೀಗಾಗಿ ಪಾಕಿಸ್ತಾನ ಟ್ಯಾಂಕ್ ಗಳ ಖರೀದಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್