ಚಿಂದ್ವಾರ(ಮಧ್ಯಪ್ರದೇಶ): ಗೋವುಗಳನ್ನು ಗೋಶಾಲೆಗಳಲ್ಲಿ ಕಾಣಲು ಬಯಸುತ್ತೇನೆ ಹೊರತು ರಾಜ್ಯದ ಬೀದಿಗಳಲ್ಲಿ ಅಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ.
ಸೋಮವಾರ ಚಿಂದ್ವಾರ ದಲ್ಲಿ ನಡೆದಿದ್ದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಕಮಲ್ ನಾಥ್ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗೋವುಗಳಿಗೆ ಆಶ್ರಯ ನಿವಾಸಗಳನ್ನು ನಿರ್ಮಿಸಬೇಕೆಂದು ಅವರು ಹೇಳಿದ್ದಾರೆ.
"ರಸ್ತೆಗಳಲ್ಲಿ ಹಸುಗಳು ಬಿಡಾಡಿಗಳಾಗಿ ತಿರುಗುವುದನ್ನು ನಾನು ಬಯಸುವುದಿಲ್ಲ.ಬದಲಿಗೆ, ನಾನು ಅವುಗಳನ್ನು ಗೋ ಶಾಲೆ, ಗೋ ಆಶ್ರ್ಯಯ ನಿವಾಸದಲ್ಲಿ ಕಾಣಲು ಬಯಸುತ್ತೇನೆ" ಅವರು ಹೇಳಿದ್ದಾರೆ.
ನವೆಂಬರ್ 28ರಂದು ನಡೆಇದ್ದ ಮಧ್ಯಪ್ರದೇಶ ಚುನಾವಣೆಗೆ ಮುನ್ನ ಪ್ರಕಟವಾಗಿದ್ದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗೋವುಗಳ ಆಶ್ರಯ ನಿವಾಸ ಸ್ಥಾಪನೆ ಪ್ರಸ್ತಾಪ ಮಾಡಲಾಗಿತ್ತು.
2003ರಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ರಾಜ್ಯದಲ್ಲಿ ಸಂಪೂರ್ಣ ಗೋ ಹತ್ಯಾ ನಿಷೇಧ ಜಾರಿಗೆ ತಂದಿತ್ತು. ಇದರಿಂದಾಗಿ ರಾಜ್ಯದಲ್ಲಿ ಬೀಡಾಡಿ ಹಸುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದುಮೂಲಗಳು ಹೇಳಿದೆ.
ರಾಜ್ಯದ ರಸ್ತೆಗಳಲ್ಲಿ ಬೀಡಾಡಿ ಹಸುಗಳ ಅಲೆದಾಟ ಸಾಮಾನ್ಯವಾಗಿದ್ದು , ಹಲವಾರು ಸಂದರ್ಭಗಳಲ್ಲಿ ಟ್ರಾಫಿಕ್ ಜಾಮ್ ಹಾಗೂ ಅಪಘಾತಕ್ಕೆ ಸಹ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics