ದೇಶ

'ಪದ್ಮಾವತ್' ವಿರುದ್ಧದ ಪ್ರತಿಭಟನೆ ಹಿಂಪಡೆದಿಲ್ಲ, ಬಿಜೆಪಿ ಬೆಲೆ ತೆರಬೇಕು: ಕರ್ಣಿ ಸೇನಾ ಮುಖ್ಯಸ್ಥ

Lingaraj Badiger
ಜೈಪೂರ: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಾತ್ಮಕ ಚಿತ್ರ 'ಪದ್ಮಾವತ್' ವಿರುದ್ಧದ ಪ್ರತಿಭಟನೆ ಹಿಂಪಡೆಯಲಾಗಿದೆ ಎಂಬ ವರದಿಗಳನ್ನು ಶ್ರೀ ಕರ್ಣಿ ಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಲ್ವಿ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದು, ನಕಲಿ ಕರ್ಣಿ ಸೇನಾ ಹಬ್ಬಿಸಿದ ನಕಲಿ ಸುದ್ದಿ ಅದು ಎಂದು ಶನಿವಾರ ಹೇಳಿದ್ದಾರೆ.
ಪ್ರತಿಭಟನಾ ನಿರತ ರಜಪೂತರ ಭಾವನೆಗಳನ್ನು ಗೌರವಿಸದ ಬಿಜೆಪಿ ತಕ್ಕ ಬೆಲೆ ತೆರಲಿದೆ. ಈಗಾಗಲೇ ಉಪ ಚುನಾವಣೆಯಲ್ಲಿ ಬಿಜೆಪಿ ಬೆಲೆ ತೆತ್ತಿದೆ ಎಂದು ಕಲ್ವಿ ತಿಳಿಸಿದ್ದಾರೆ.
ಈಗ ದೇಶದಲ್ಲಿ ಹಲವು ನಕಲಿ ಕರ್ಣಿ ಸೇನಾಗಳು ಹುಟ್ಟಿಕೊಳ್ಳುತ್ತಿದ್ದು, ಸ್ವಹಿತಾಸಕ್ತಿಗಾಗಿ ಈಗ ಅಂತಹ ನಕಲಿ ಕರ್ಣಿ ಸೇನಾಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕಲ್ವಿ ಆರೋಪಿಸಿದ್ದಾರೆ.
ಭಾರತದಲ್ಲಿ ಕೇವಲು ಒಂದು ರಜಪೂತ ಕರ್ಣಿ ಸೇನಾ ಕಾರ್ಯನಿರ್ವಹಿಸುತ್ತಿದೆ ಮತ್ತು ನಾನು ಅದರ ಸಂಸ್ಥಾಪಕ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ ಎಂದಿದ್ದಾರೆ. 
ಕರ್ಣಿ ಸೇನೆ ಪದ್ಮಾವತ್ ಚಿತ್ರದ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸಿತ್ತು. 
SCROLL FOR NEXT