ದೇಶ

ಕಂಬಳ ಕ್ರೀಡೆಗೆ ನಿಷೇಧ ಕೋರಿ ಪೇಟಾ ಮನವಿ: ಫೆ.12ರಂದು ಸುಪ್ರೀಂ ವಿಚಾರಣೆ

Sumana Upadhyaya
ನವದೆಹಲಿ: ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾದ ಎತ್ತಿನ ಓಟ ಕಂಬಳವನ್ನು ನಿಷೇಧಿಸಬೇಕೆಂದು ಪೇಟಾ ಸಂಘಟನೆ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಇದೇ 12ರಂದು ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಮ್.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಪೇಟಾ ಸಂಘಟನೆ ಪರ ವಕೀಲ ಅರುಣಿಮಾ ಕೆಡಿಯಾ ಮನವಿ ಸಲ್ಲಿಸಿ ಶೀಘ್ರ ವಿಚಾರಣೆ ನಡೆಸುವಂತೆ ನಮೂದಿಸಿದರು.
ಕಂಬಳ ಕ್ರೀಡೆಯ ಪಾವಿತ್ರ್ಯತೆಯನ್ನು ಕಾಪಾಡುವಂತೆ ಕರ್ನಾಟಕ ಸರ್ಕಾರ ವಿಧೇಯಕವನ್ನು ಹೊರಡಿಸಿದೆ ಎಂದು ಕೆಡಿಯಾ ನ್ಯಾಯಾಲಯಕ್ಕೆ ತಿಳಿಸಿದರು.
ಕಂಬಳ ಕ್ರೀಡೆ ಆಚರಣೆಯನ್ನು ಮುಂದುವರಿಸುವ ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿದ್ದು ರಾಷ್ಟ್ರಪತಿಗಳಿಂದ ಒಪ್ಪಿಗೆ ಸಿಗಲು ಬಾಕಿಯಿದೆ ಎಂದು ಕೆಡಿಯಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪೇಟಾ ಸಂಘಟನೆ ಸಲ್ಲಿಸಿದ್ದ ಮನವಿಗೆ ಮೂರು ವಾರಗಳೊಳಗೆ ಉತ್ತರಿಸುವಂತೆ ಕಳೆದ ಡಿಸೆಂಬರ್ 12ರಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ತಿಳಿಸಿದ್ದು, ಪೇಟಾ ಸಂಘಟನೆಗೆ 2 ವಾರಗಳೊಳಗೆ ಪ್ರತಿವಾದವನ್ನು ಮಂಡಿಸಲು ಕಾಲಾವಕಾಶ ನೀಡಿತ್ತು.
SCROLL FOR NEXT