ದೇಶ

ಅಕ್ರಮ ಹಣ ವರ್ಗಾವಣೆ: ಲಾಲು ಪುತ್ರಿ ಮೀಸಾ ಭಾರತಿ, ಪತಿಗೆ ಕೋರ್ಟ್ ಸಮನ್ಸ್

Vishwanath S
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ಮೀಸಾ ಭಾರತಿ ಹಾಗೂ ಅವರ ಪತಿ ಶೈಲೇಶ್ ಕುಮಾರ್ ವಿರುದ್ಧ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. 
ಭಾರತಿ ಅವರ ಪತಿಯ ಕಂಪನಿ ‘ಮಿಶೈಲ್ ಪ್ಯಾಕರ್ಸ್ ಆ್ಯಂಡ್ ಪ್ರಿಂಟರ್ಸ್’ ಅಕ್ರಮಕ್ಕೆ ನೆರವು ನೀಡಿದ ಆರೋಪದ ಮೇಲೆ ಎಲ್ಲಾ ಆರೋಪಿಗಳಿಗೂ ಮಾರ್ಚ್ 5ರಂದು ಕೋರ್ಟ್ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. 
ಜಾರಿ ನಿರ್ದೇಶನಾಲಯದ (ಇಡಿ) ಡಿಸೆಂಬರ್ 23ರಂದು ಅಂತಿಮ ವರದಿಯನ್ನು ಕೋರ್ಟ್ ಗೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲಾ ಆರೋಪಿಗಳಿಗೆ ವಿಶೇಷ ನ್ಯಾಯಾಧೀಶರಾದ ಎಂಕೆ ಮಲ್ಹೋತ್ರ ಅವರು ಸಮನ್ಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ತೋಟದ ಮನೆಯೊಂದನ್ನು ತನಿಖಾ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿತ್ತು. ಮೀಸಾ ಮತ್ತು ಶೈಲೇಶ್ ಗೆ ಸೇರಿದ್ದ ಈ ಮನೆಯನ್ನು ಮಿಶಾಲಿ ಪ್ಯಾಕರ್ಸ್ ಆ್ಯಂಡ್ ಪ್ರಿಂಟರ್ಸ್ ಎಂಬ ಹೆಸರಲ್ಲಿ ನೋಂದಾವಣೆ ಮಾಡಲಾಗಿದೆ. 2008-09ರಲ್ಲಿ ಅಕ್ರಮವಾಗಿ ಹಣ ವರ್ಗಾಯಿಸಲಾಗಿದ್ದ 1.2 ಕೋಟಿ ರುಪಾಯಿ ಹಣದಿಂದ ಈ ಮನೆಯನ್ನು ಖರೀದಿಸಲಾಗಿದೆ ಎಂದು ಇಡಿ ಆರೋಪಿಸಿತ್ತು.
SCROLL FOR NEXT