ಬದಗಾಮ್: ಉಗ್ರ ಸಂಘಟನೆ ಸೇರುವ ಉದ್ದೇಶದಿಂದ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಉಗ್ರರಿಂದ ತರಬೇತಿ ಪಡೆದು ವಾಪಸ್ ಆಗಿದ್ದ ಕಾಶ್ಮೀರಿ ಯುವಕನೋರ್ವ ಶುಕ್ರವಾರ ಭಾರತೀಯ ಸೇನೆಯ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಸೇನಾ ಮೂಲಗಳು ತಿಳಿಸಿರುವಂತೆ ಜಮ್ಮು ಮತ್ತು ಕಾಶ್ಮೀರದ ಬದಗಾಮ್ ಜಿಲ್ಲೆಯ ನಿವಾಲಿ ಫರೂಖ್ ಪರಾ ಎಂಬಾತ ಸೇನೆಯ ಮುಂದೆ ಶರ್ಮಾಗಿದ್ದಾನೆ ಎಂದು ತಿಳಿದುಬಂದಿದೆ. ಫರೂಖ್ ಪರಾ ಈ ಹಿಂದೆ ಪಾಕಿಸ್ತಾನದಿಂದ ವೀಸಾ ಪಡೆದು ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದನಂತೆ. ಅಲ್ಲದೆ ಅಲ್ಲಿನ ಬುಡಕಟ್ಟು ಪ್ರದೇಶಗಳಲ್ಲಿರುವ ಉಗ್ರ ತರಬೇತಿ ಕೇಂದ್ರಗಳಲ್ಲಿ ಶಸ್ತ್ರಾಸ್ತ್ರ ಬಳಕೆ ಮತ್ತು ನಿರ್ವಹಣೆ ಕುರಿತು ತರಬೇತಿ ಪಡೆದಿದ್ದ. ಪಾಕ್ ಕುಖ್ಯಾತ ಉಗ್ರ ತರಬೇತುದಾರರಾದ ಲಷ್ಕರ್ ಸಂಘಟನೆಯ ಹಂನ್ಜಲ್ಲಾ ಅದ್ನಾನ್ ಮತ್ತು ಮಲ್ಲಿಕ್ ಸಾಬ್ ಬಳಿ ವಿವಿಧ ಶಸ್ತ್ರಾಸ್ತ್ರಗಳ ತರಬೇತಿ ಪಡೆದಿದ್ದನಂತೆ.
ಅಲ್ಲದೆ ಐಇಡಿ ಸೇರಿದಂತೆ ಕೆಲ ಸುಧಾರಿತ ಬಾಂಬ್ ಉಪಕರಣಗಳ ಕುರಿತೂ ತರಬೇತಿ ಪಡೆದು ಭಾರತಕ್ಕೆ ವಾಪಸ್ ಆಗಿದ್ದ. ಭಾರತಕ್ಕೆ ಬಂದ ಬಳಿಕ ಅಜ್ಞಾತನಾಗಿದ್ದ ಫರೂಖ್ ಪರಾ ಇದೀಗ ಸೇನೆಯ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು ಈ ಹಿಂದೆ ಕಾಶ್ಮೀರದ ವಿವಿಧೆಡೆ ನಡೆಯುತ್ತಿದ್ದ ಮೂಲಭೂತ ವಾದಿಗಳ ಭಾಷಣಕ್ಕೆ ತೆರಳುತ್ತಿದ್ದ ಫರೂಖ್ ಪರಾ ಅವರ ಭಾಷಣಗಳಿಂದಾಗಿ ಉಗ್ರವಾದದತ್ತ ಉತ್ತೇಜಿತನಾಗಿದ್ದನಂತೆ. ಇದೇ ಕಾರಣಕ್ಕೆ ಆತ ಉಗ್ರ ಸಂಘಟನೆಯ ಯುವಕರೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics