ತ್ರಿಪುರ: ನರೇಂದ್ರ ಮೋದಿ ಅವರು ಬಿಜೆಪಿ ನಾಯಕರಂತೆ ಮಾತನಾಡುತ್ತಿದ್ದಾರೆ ಹೊರತು ದೇಶದ ಪ್ರಧಾನಿಯಂತೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ತ್ರಿಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಎಡಪಕ್ಷ ಸರ್ಕಾರವನ್ನು ಕಿತ್ತೋಗೆಯಿರಿ ಎಂದು ಮತದಾರರಿಗೆ ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಇದೀಗ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
ಫೆಬ್ರವರಿ 18ರಂದು ತ್ರಿಪುರ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು ಪ್ರಧಾನಿ ಮೋದಿ ಅವರು ತ್ರಿಪುರದಲ್ಲಿ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನಾಯಕನಂತೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿಪಿ ಜೋಶಿ ಹೇಳಿದ್ದಾರೆ.
ನಿನ್ನೆ ಅಗರ್ತಲಾದಲ್ಲಿ ಬಿಜೆಪಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಾಣಿಕ್ ಸರ್ಕಾರ ಅವರ ಸರ್ಕಾರವನ್ನು "ಹೀರಾ'' ಸರ್ಕಾರ್ ಬದಲಿಸಲಿದೆ. ಹೀರಾ ಎಂದರೆ ಹೈವೇ, ಐ-ವೇ (ಡಿಜಿಟಲ್ ಕನೆಕ್ಟಿವಿಟಿ), ರೋಡ್ ವೇ ಮತ್ತು ಏರ್ ವೇ ಎಂದು ಹೇಳಿದರು. ಇಲ್ಲಿ ಅಜ್ಞಾತ ಮಂತ್ರವಾದಿಯ ಸರ್ಕಾರವಿದ್ದು, ಈಗ ಅದಕ್ಕೆ ಕೊನೆಗಾಲ ಬಂದಿದೆ. ಇನ್ನು ಮುಂದೆ ತ್ರಿಪುರದಲ್ಲಿ ಅಭಿವೃದ್ಧಿಯ ಮಹಾಪರ್ವ ಆರಂಭವಾಗಲಿದೆ ಎಂದು ಪ್ರಧಾನಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics