ನವದೆಹಲಿ: ನಗುವಿಗೆ ಈ ಸರ್ಕಾರ ಜಿಎಸ್ ಟಿ ವಿಧಿಸಿಲ್ಲ..ಅಂತೆಯೇ ನಗಲು ನನಗೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಕಾಂಗ್ರೆಸ್ ಸಂಸದೆ ರೇಣುಕಾ ಚೌದರಿ ಹೇಳಿದ್ದಾರೆ.
ಸಂಸತ್ ಕಲಾಪದಲ್ಲಿ ಪ್ರಧಾನಿ ಮೋದಿ ಭಾಷಣದ ವೇಳೆ ಕಾಂಗ್ರೆಸ್ ಸಂಸದೆ ರೇಣುಕಾ ಚೌದರಿ ಅವರು ಏರುಧ್ವನಿಯಲ್ಲಿ ನಗುವ ಮೂಲಕ ಉಪರಾಷ್ಟ್ರಪತಿ ವೆಂಕಯ್ಯನಾಯ್ಜು ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ ರೇಣುಕಾ ಅವರ ನಗುವನ್ನು ರಾಮಾಯಣದ ಪಾತ್ರವೊಂದಕ್ಕೆ ಹೋಲಿಕೆ ಮಾಡಿದ್ದರು. ಈ ಘಟನೆ ಬಳಿಕ ಸಂಸದೆ ರೇಣುಕಾ ಚೌದರಿ ಅವರ ನುಗುವಿನ ಕುರಿತು ಸಾಮಾಜಿಕ ತಾಣದಲ್ಲಿ ವ್ಯಾಪಕ ಚರ್ಚೆ ಮತ್ತು ಹ್ಯಾಶ್ ಟ್ಯಾಗ್ ಗಳು ಹರಿದಾಡುತ್ತಿದೆ.
ಈ ಸಂಬಂಧ ಗೋವಾದಲ್ಲಿ ಮಾತನಾಡಿರುವ ರೇಣುಕಾ ಚೌದರಿ, ನಗುವಿಗೆ ಈ ಸರ್ಕಾರ ಜಿಎಸ್ ಟಿ ವಿಧಿಸಿಲ್ಲ..ಅಂತೆಯೇ ನಗಲು ನನಗೆ ಯಾರ ಅಪ್ಪಣೆಯೂ ಬೇಕಿಲ್ಲ. ರಾಮಾಯಣದ ನಕರಾತ್ಮಕ ಪಾತ್ರಕ್ಕೆ ನನ್ನನ್ನು ಹೋಲಿಕೆ ಮಾಡುವ ಮೂಲಕ ಪ್ರಧಾನಿ ಮೋದಿ ತಮ್ಮ ಕೀಳು ಮಟ್ಟದ ಅಭಿರುಚಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ #LaughlikeSurpankha, #Lolisapasse and #LaughLikeRenukaChowdhury ನಂತಹ ಹ್ಯಾಶ್ ಟ್ಯಾಗ್ ಗಳು ಹರಿದಾಡುತ್ತಿದೆ. ಇವುಗಳ ಬಗ್ಗೆ ನನಗೆ ಚಿಂತೆ ಇಲ್ಲ. ನೀವು ಸರಿ ಇದ್ದರೆ ಬೇರೆಯವರು ಏನೆಂದು ತಿಳಿದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಚಿಂತೆ ಬೇಡ. ನಾನು ಏನನ್ನು ತಿನ್ನಬೇಕು, ಹೇಗಿರಬೇಕು. ಹೇಗೆ ನಗಬೇಕು ಎನ್ನುವ ಯಾವುದೇ ನಿಯಮಗಳಿಲ್ಲ. ನಗಲು ಮತ್ತೊಬ್ಬರ ಅನುಮತಿ ಬೇಕಿಲ್ಲ. ಸಂಸತ್ ಕಲಾಪದ ಬೆಳವಣಿಗೆ ದೇಶದಲ್ಲಿ ಮಹಿಳೆಯರ ಸ್ಥಿತಿಗೆ ಕನ್ನಡಿಯಾಗಿದೆ ಎಂದು ರೇಣುಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳ ಹಿಂದೆಯೇ ನಾನು ಈ ಸಮಾಜವನ್ನು ಎದುರಿಸಿದ್ದೆ. ನನ್ನ ತಂದೆಯ ಅಂತ್ಯ ಕ್ರಿಯೆಗೆ ಖುದ್ಧು ನಾನೇ ಪಾಲ್ಗೊಳ್ಳುವ ಮೂಲಕ ಸಮಾಜದ ನಿಯಮಗಳನ್ನು ಎದುರಿಸಿದ್ದೆ. ನನ್ನ ತಂದೆ ನನ್ನು ಭಾರತ ದೇಶದ ಪ್ರಜೆಯಾಗಿ ಬೆಳೆಸಿದ್ದಾರೆಯೇ ಹೊರತು ಹೆಣ್ಣು ಅಥವಾ ಗಂಡಾಗಿ ಅಲ್ಲ ಎಂದು ರೇಣುಕಾ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos