ದೇಶ

ಸುಂಜವಾನ್ ಸೇನಾ ಕ್ಯಾಂಪ್ ದಾಳಿ ಪ್ರಕರಣ: ಸಲಹುದ್ದೀನ್, ಮಸೂದ್ ದಾಳಿಯ ಮಾಸ್ಟರ್'ಮೈಂಡ್'ಗಳು- ವರದಿ

Manjula VN
ನವದೆಹಲಿ: ಸುಂಜ್ವಾನ್ ಸೇನಾ ಕ್ಯಾಂಪ್ ಮೇಲೆ ನಡೆದ ಉಗ್ರರ ದಾಳಿ ಪ್ರಕರಣದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್ ಮತ್ತು ಜೈಷ್-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮಾಸ್ಟರ್ ಮೈಂಡ್ ಗಳಾಗಿದ್ದಾರೆಂದು ಗುಪ್ತಚರ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 
ದಾಳಿಗೂ ಮುನ್ನ ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಹಾಗೂ ಜೈಷ್-ಇ-ಮೊಹಮ್ಮದ್ ಎರಡು ಉಗ್ರ ಸಂಘಟನೆಗಳ ಮುಖ್ಯಸ್ಥ ನಡುವೆ ಸಭೆ ನಡೆದಿದೆ. ಸಭೆ ಬಳಿಕ ಎರಡೂ ಉಗ್ರ ಸಂಘಟನೆಗಳು ಮುಜಾಫರಾಬಾದ್ ನಲ್ಲಿ ಉಗ್ರರ ಕ್ಯಾಂಪ್ ನ್ನು ಸ್ಥಾಪನೆ ಮಾಡಿಕೊಕಂಡಿದೆ ಎಂದು ವರದಿಗಳು ತಿಳಿಸಿವೆ. 
ಸುಂಜ್ವಾನ್ ಸೇನಾ ಕ್ಯಾಂಪ್ ಮೇಲೆ ನಿನ್ನೆ ದಾಳಿ ನಡೆಸಿದ ಉಗ್ರರು ಇದೇ ಕ್ಯಾಂಪ್ ನಲ್ಲಿ ತರಬೇತಿ ಪಡೆದು, ನಂತರ ಗಡಿ ದಾಟಿ ಭಾರತದೊಳಗೆ ಪ್ರವೇಶಿಸಿದ್ದಾರೆಂದು ತಿಳಿದುಬಂದಿದೆ. 
ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಕಾರ್ಯಾಚರಣೆಗಳಿದಿದ್ದ ಭಾರತೀಯ ಸೇನಾ ಪಡೆಗಳು, ಉಗ್ರರಿಗೆ ದಿಟ್ಟ ಉತ್ತರ ನೀಡುವ ಮೂಲಕ ಮೂವರು ಉಗ್ರರನ್ನು ಸದೆಬಡಿದಿದ್ದಾರೆ. ಹತ್ಯೆಯಾದ ಉಗ್ರರಿಂದ ಎಕೆ-47 ರೈಫಲ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. 
SCROLL FOR NEXT