ದೇಶ

ಕಾಶ್ಮೀರದಲ್ಲಿ ಅವಕಾಶವಾದಿ ಮೈತ್ರಿಗಾಗಿ ಯೋಧರು ಬಲಿ: ರಾಹುಲ್ ಗಾಂಧಿ

Lingaraj Badiger
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿಯ ಅವಕಾಶವಾದಿ ಮೈತ್ರಿಗಾಗಿ ನಮ್ಮ ಯೋಧರು ಬಲಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ 'ಅಸ್ತಿತ್ವದಲ್ಲಿಲ್ಲದ' ನೀತಿಯನ್ನು ಹೇರುತ್ತಿದ್ದು, ಇದರ ಪರಿಣಾಮ ಕಣಿವೆ ರಾಜ್ಯ ಹೊತ್ತಿ ಉರಿಯುತ್ತಿದೆ ಮತ್ತು ಅವಕಾಶವಾದಿ ಮೈತ್ರಿಯಿಂದಾಗಿ ಯೋಧರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ಎಂದು ಪಿಡಿಪಿ ಹೇಳುತ್ತಿದೆ. ಆದರೆ ಬಿಜೆಪಿಯ ರಕ್ಷಣಾ ಸಚಿವರು ಮಾತ್ರ ಪಾಕಿಸ್ತಾನ ತಕ್ಕ ಬೆಲೆ ತೆರಲಿದೆ ಎನ್ನುತ್ತಿದ್ದಾರೆ. ಈ ಮಧ್ಯೆ ಬಿಜೆಪಿ,ಪಿಡಿಪಿ ಅವಕಾಶವಾದಿ ಮೈತ್ರಿಗಾಗಿ ನಮ್ಮ ಯೋಧರು ಬಲಿಯಾಗುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕಾಶ್ಮೀರಿದಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಗಾಗ ದಾಳಿ ನಡೆಸುತ್ತಲೇ ಬಂದಿದೆ.
SCROLL FOR NEXT