ದೇಶ

ತಾಜ್ ಮಹಲ್ ಭೇಟಿ ಮತ್ತಷ್ಟು ದುಬಾರಿ: ಪ್ರವೇಶ ದರ ಹೆಚ್ಚಳ, ಮುಖ್ಯ ಸಮಾಧಿ ನೋಡಲು ರು.200

Lingaraj Badiger
ನವದೆಹಲಿ: ವಿಶ್ವದ ಏಳು ಅದ್ಬುತಗಳಲ್ಲಿ ಒಂದಾದ ವಿಶ್ವವಿಖ್ಯಾತ ತಾಜ್‌ ಮಹಲ್ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಇದೊಂದು ಶಾಕ್ ಸುದ್ದಿ. ಹೌದು, ಉತ್ತರ ಪ್ರದೇಶ ಸರ್ಕಾರ ತಾಜ್ ಮಹಲ್ ಪ್ರವೇಶ ಟಿಕೆಟ್ ದರವನ್ನು 40 ರುಪಾಯಿಯಿಂದ 50 ರುಪಾಯಿ ಏರಿಕೆ ಮಾಡಿದೆ. ಅಲ್ಲದೆ ಮುಖ್ಯ ಸಮಾಧಿ ನೋಡಲು ಹೊಸ ದರ ಪರಿಚಯಿಸಿದ್ದು, ಅದಕ್ಕೆ ಬರೊಬ್ಬರಿ 200 ರುಪಾಯಿ ನಿಗದಿ ಮಾಡಿದೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರು, ತಾಜ್ ಮಹಲ್ ಅನ್ನು 'ಸಂರಕ್ಷಿಸಲು ಮತ್ತು ಜನಸಮುದಾಯದ ಉತ್ತಮ ನಿರ್ವಹಣೆಗಾಗಿ' ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಮುಖ್ಯ ಸಮಾಧಿ ನೋಡಲು ಯಾವುದೇ ಪ್ರತ್ಯೇಕ ಟಿಕೆಟ್ ಪಡೆಯಬೇಕಾಗಿಲ್ಲ. ಈಗ ಮುಖ್ಯ ಸಮಾಧಿ ನೋಡಲು ಪ್ರತ್ಯೇಕ ಟಿಕೆಟ್ ಪಡೆಯಬೇಕಾಗಿದ್ದು, ಅದರ ಬೆಲೆ 200 ರುಪಾಯಿ ಮಾಡಲಾಗಿದೆ.
ಮುಂದಿನ ಪೀಳಿಗೆಗಾಗಿ ತಾಜ್ ಮಹಲ್ ಅನ್ನು ನಾವು ಸಂರಕ್ಷಿಸಬೇಕಾಗಿದೆ. ಹೀಗಾಗಿ ಪ್ರವೇಶ ದರವನ್ನು 50 ರುಪಾಯಿಗೆ ಏರಿಕೆ ಮಾಡಲಾಗಿದೆ ಮತ್ತು ಇದು ಕೇವಲ ಮೂರು ಗಂಟೆಗಳ ಅವಧಿಗಾಗಿ ಎಂದು ಸಚಿವರು ತಿಳಿಸಿದ್ದಾರೆ.
ನೂತನ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ.
SCROLL FOR NEXT