ನವದೆಹಲಿ: ಪಾಕಿಸ್ತಾನ ಛೂತ್ ಪುತಿಯಾ ದೇಶ ಅಂದರೆ ಚಿಕ್ಕ ರಾಷ್ಟ್ರ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಉಗ್ರ ಚಟುವಟಿಕೆಗಳನ್ನು ಕುರಿತು ಮಾತನಾಡಿದ ಅವರು, ಪಾಕಿಸ್ತಾನ ಅದೊಂದು ಚಿಕ್ಕ ರಾಷ್ಟ್ರ. ಪಾಕಿಸ್ತಾನವೇ ಆಗಲೀ ಅಥವಾ ಚೀನಾ ವೇ ಆಗಲಿ ಭಾರತೀಯ ಸೇನಾ ಸೂಕ್ತ ಪ್ರತ್ಯುತ್ತರ ನೀಡಲಿದೆ ಎಂದರು.
ಪಾಕಿಸ್ತಾನ ಯಾವುದೇ ರಾಷ್ಟ್ರಗಳೊಂದಿಗೆ ಉತ್ತಮ ಸ್ನೇಹ ಸಂಪರ್ಕ ಹೊಂದಿಲ್ಲ. ಪಾಕಿಸ್ತಾನ ರಾಷ್ಟ್ರವೇ ಅಲ್ಲ , ಅದೊಂದು ಚಿಕ್ಕರಾಷ್ಟ್ರ ಅದರ ಬಗ್ಗೆ ಕೆಲವೇ ಜನ ಮಾತನಾಡುತ್ತಾರೆ. ಆದರೆ, ಪಾಕಿಸ್ತಾನ ತನ್ನ ಮಿತಿಯನ್ನು ಮೀರುತ್ತಿದ್ದು, ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿದರು.
ಇತ್ತೀಚಿಗೆ ಸುಂಜುವಾನ್ ಸೇನಾ ಶಿಬಿರದ ಮೇಲೆ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಸೇರಿ ಆರು ಮಂದಿ ಸಾವನ್ನಪ್ಪಿದ್ದರು.