ದೇಶ

ಕಾಂಗ್ರೆಸ್ ನೀರವ್ ಮೋದಿಯನ್ನು 'ಛೋಟಾ ಮೋದಿ' ಎಂದು ಕರೆದಿರುವುದು ಸರಿಯಲ್ಲ: ರವಿಶಂಕರ್ ಪ್ರಸಾದ್

11 ಸಾವಿರ ಕೋಟಿ ರುಪಾಯಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ರೂವಾರಿ ನೀರವ್ ಮೋದಿಯನ್ನು ಕಾಂಗ್ರೆಸ್ 'ಛೋಟಾ ಮೋದಿ' ಎಂದು...

ನವದೆಹಲಿ: 11 ಸಾವಿರ ಕೋಟಿ ರುಪಾಯಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ರೂವಾರಿ ನೀರವ್ ಮೋದಿಯನ್ನು ಕಾಂಗ್ರೆಸ್ 'ಛೋಟಾ ಮೋದಿ' ಎಂದು ಕರೆದಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. 
ಕಾಂಗ್ರೆಸ್ ಛೋಟಾ ಮೋದಿ ಎಂಬಂತಹ ಪದಗಳನ್ನು ಬಳಸುತ್ತಿರುವುದು ಸ್ವೀಕಾರಾರ್ಹವಲ್ಲ. ಇಂತಹ ಪದಗಳನ್ನು ಬಳಸಿದವರ ವಿರುದ್ಧ ಬಿಜೆಪಿ ಕಠಿಣ ಕ್ರಮಕೈಗೊಳ್ಳುತ್ತದೆ ಹಾಗೂ ಇದು ಅವಹೇಳನಕಾರಿ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. 
ಕಾಂಗ್ರೆಸ್ ನಾಯಕರ ಹಲವು ಚಿತ್ರೀಣಗಳು ನಮ್ಮ ಬಳಿ ಇವೆ. ಆದರೆ ನಾವು ಕೆಳ ಮಟ್ಟಕ್ಕೆ ಇಳಿಯಲು ಬಯಸುವುದಿಲ್ಲ. ಛೋಟಾ ಮೋದಿ ಎಂದರೆ ಏನು? ದೇಶದಲ್ಲಿ ಆ ಉಪನಾಮದಿಂದ ಬಹಳಷ್ಟು ಜನರಿದ್ದಾರೆ. 
ನಿರಾವ್ ಮೋದಿ ಅವರ 13 ಸಾವಿರ ಕೋಟಿ ರುಪಾಯಿ ಮೌಲ್ಯದ ಆಸ್ತಿ ಇದೆ. ಅವರ ಪಾಸ್ ಪೋರ್ಟ್ ಹಿಂತೆಗೆದುಕೊಳ್ಳಬೇಕು. ಕಾಂಗ್ರೆಸ್ ಫೋಟೋ ರಾಜಕೀಯ ನಿಲ್ಲಿಸಬೇಕು ಎಂದರು. 
ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಒಕ್ಕೂಟದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರಾವ್ ಮೋದಿ ಅವರನ್ನು ಭೇಟಿ ಮಾಡಿರಲಿಲ್ಲ. ನಿರಾವ್ ಮೋದಿ ಅವರು ದಾವೋಸ್ಗೆ ಹೋಗಿದಿದ್ದು ಅವರ ಸ್ವಂತ ಉದ್ದೇಶಕ್ಕಾಗಿ ಅಷ್ಟೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT