ದೇಶ

ಬಂಧಿತ ಇಂಡಿಯನ್ ಮುಜಾಹೀದ್ದೀನ್ ಉಗ್ರ ಅರೀಜ್ ಖಾನ್ 25 ದಿನ ಪೊಲೀಸರ ವಶಕ್ಕೆ

Manjula VN
ನವದೆಹಲಿ: ಬಂಧನಕ್ಕೊಳಗಾಗಿರುವ 165 ಜನರನ್ನು ಬಲಿ ಪಡೆದ 5 ಸ್ಫೋಟ ಪ್ರಕರಣಗಳಲ್ಲಿ ಬೇಕಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಮುಖ ಉಗ್ರನ್ನು ದೆಹಲಿ ನ್ಯಾಯಾಲಯ 25 ದಿನಗಳ ಕಾಲ ಪೊಲೀಸರು ವಶಕ್ಕೆ ನೀಡಿದೆ ಎಂದು ಗುರುವಾರ ತಿಳಿದುಬಂದಿದೆ. 
ಬಂಧಿಕ ಉಗ್ರ ಅರೀಝ್ ಖಾನ್ ನನ್ನು ಹೆಚ್ಚಿನ ವಿಚಾರಣೆಗಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಿದ್ಧಾರ್ಥ್ ಶರ್ಮಾ ಅವರು, 25 ದಿನಗಳ ಕಾಲ ದೆಹಲಿ ಪೊಲೀಸರ ವಶಕ್ಕೆ ನೀಡಿದ್ದಾರೆ. 
ಬಾಟ್ಲಾ ಹೌಸ್ ಪ್ರಕರಣ ಸೇರಿದಂತೆ ಉತ್ತರಪ್ರದೇಶ, ಗುಜರಾತ್ ಹಾಗೂ ರಾಜಧಾನಿ ದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಈತತನ್ನು ವಿಚಾರಣೆಗೊಳಪಡಿಸುವ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಇದರಂತೆ ನ್ಯಾಯಾಲಯ 25 ದಿನಗಳ ಕಾಲ ವಶಕ್ಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಬಾಟ್ಲಾ ಹೌಸ್ ಎನ್ ಕೌಂಟರ್ ವೇಳೆ ಪರಾರಿಯಾಗಿದ್ದ ಉಗ್ರ ಆರಿಜ್ ಖಾನನ್ನು ದೆಹಲಿ ಪೊಲೀಸರು ಫೆ.13 ರಂದು ನೇಪಾಳದಲ್ಲಿ ಬಂಧನಕ್ಕೊಳಪಡಿಸಿದ್ದರು. 
ಈತ 2008ರಲ್ಲಿ ದೆಹರಿಯ ಕರೋಲ್ ಬಾಗ್, ಕನ್ಹಾಟ್ ಪ್ಲೇಸ್, ಗ್ರೇಟರ್ ಕೈಲಾಶ್ ನಲ್ಲಿ ನಡೆದಿದ್ದ ಸ್ಫೋಟ, 2008ರ ಜೈಪುರ ಸ್ಫೋಟ, 2008ರ ಅಹಮದಾಬಾದ್ ಸ್ಫೋಟ ಮತ್ತು 2007ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ಸ್ಫೋಟ ಪ್ರಕರಣಗಳ ಪ್ರಮುಖ ಸೂತ್ರಧಾರನಾಗಿದ್ದ ಎಂಬುದು ಇದೀಗ ಬೆಳಕಿಗೆ ಬಂದಿದೆ. ಈ 5 ಸ್ಫೋಟದ ಘಟನೆಗಳಲ್ಲಿ ಒಟ್ಟು 165 ನ ಬಲಿಯಾಗಿ 535 ಜನರು ಗಾಯಗೊಂಡಿದ್ದರು. 
2008ರ ಸೆ.19 ರಂದು ದೆಹಲಿಯ ಜಾಮಿಯಾ ನಗರ್ ನ ಬಾಟ್ಲಾ ಹೌಸ್ ನಲ್ಲಿ ಉಗ್ರರು ಇದ್ದಾರೆ ಎಂಬ ಶಂಕೆ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಡೆದ ಎನ್ ಕೌಂಟರ್ ನಲ್ಲಿ ಇಂಡಿಯನ್ ಮುಜೀಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರು ಹತ್ಯೆಯಾಗಿದ್ದರು. ಜೊತೆಗೆ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಹೊಂದಿದ್ದ ಮೋಹನ್ ಚಾಂದ್ ಶರ್ಮಾ ಉಗ್ರರ ಗುಂಡಿಗೆಹ ಬಲಿಯಾಗಿದ್ದರು. 
ಈ ವೇಳೆ ಮನೆಯಲ್ಲಿದ್ದ ಆರಿಜ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈತನ ತಲೆಗೆ ರೂ.15 ಲಕ್ಷ ಘೋಷಿಸಲಾಗಿತ್ತು. 
ಪರಾರಿಯಾದ ಬಳಿಕ ಈತ ಭಾರತದಲ್ಲಿ ಸಿಮಿ ಸಹಯೋಗದೊಂದಿಗೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಪುರನ್ ಸಕ್ರಿಯಗೊಳಿಸುಲ್ಲಿ ತೊಡಗಿಸಿಕೊಂಡಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 
SCROLL FOR NEXT