ಇಟಾನಗರದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 
ದೇಶ

ಪ್ರಗತಿಯ ಕಿರಣಗಳು ಇಲ್ಲಿ ಬೆಳಗುತ್ತವೆ: ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿ

ಸೂರ್ಯ ಉದಯಿಸುವ ಅರುಣಾಚಲ ಪ್ರದೇಶದಿಂದ ಮುಂದಿನ ದಿನಗಳಲ್ಲಿ ....

ಇಟಾನಗರ: ಸೂರ್ಯ ಉದಯಿಸುವ ಅರುಣಾಚಲ ಪ್ರದೇಶದಿಂದ ಮುಂದಿನ ದಿನಗಳಲ್ಲಿ ಬೆಳವಣಿಗೆಯ ಕಿರಣಗಳು ಬೆಳಗಲಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಇಂದು ದಾರ್ಜಿ ಖಾಂಡು ರಾಜ್ಯ ಕನ್ವೆನ್ಶನ್ ಸೆಂಟರ್ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರುಣಾಚಲ ಪ್ರದೇಶಕ್ಕೆ ಹೋಗಿ ಈ ಕನ್ವೆನ್ಶನ್ ಸೆಂಟರ್ ನಲ್ಲಿ ಪ್ರಮುಖ ಸಭೆಗಳನ್ನು ನಡೆಸಿ ಎಂದು ನಾನು ವೈಯಕ್ತಿಕವಾಗಿ ಜನರಿಗೆ ಹೇಳುತ್ತೇನೆ ಎಂದರು.
ಈ ಕನ್ವೆನ್ಶನ್ ಸೆಂಟರ್ ನಗರದ ಪ್ರಮುಖ ಕೇಂದ್ರವಾಗಿ ಮಾರ್ಪಡಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮಾತ್ರ ಏಕೆ ಸಭೆಗಳನ್ನು ನಡೆಸಬೇಕು? ನಾವು ಎಲ್ಲಾ ರಾಜ್ಯಗಳಿಗೆ ಹೋಗಬೇಕು, ಹೀಗಾಗಿ ನಾನು ಶಿಲ್ಲಾಂಗ್ ಗೆ ಈಶಾನ್ಯ ಭಾರತ ಮಂಡಳಿ ಸಭೆಯಲ್ಲಿ ಭಾಗವಹಿಸಲು ಬಂದೆ. ಸಿಕ್ಕಿಂನಲ್ಲಿ ಕೃಷಿಗೆ ಸಂಬಂಧಪಟ್ಟ ಪ್ರಮುಖ ಸಭೆಯೊಂದು ನಡೆಯಿತು ಎಂದು ಪ್ರಧಾನಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ, ರಾಜ್ಯ ನಾಗರಿಕ ಸಚಿವಾಲಯ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.ಟೊಮೊ ರಿಬಾ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶೈಕ್ಷಣಿಕ ವಿಭಾಗ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ದೇಶದ ಜನತೆಗೆ ಅಗ್ಗದ ದರದಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಬೇಕು. ಇದಕ್ಕಾಗಿ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ನಾವು ಕಾರ್ಯಾರಂಭ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಹೆಚ್ಚೆಚ್ಚು ವೈದ್ಯಕೀಯ ಶಿಕ್ಷಣ ಪಡೆದರೆ ಆ ಪ್ರದೇಶದಲ್ಲಿನ ಜನತೆಗೆ ಉತ್ತಮ ಆರೋಗ್ಯ ಸೇವೆ ದೊರಕಲು ಸಹಾಯಕವಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಈಶಾನ್ಯ ಭಾರತ ಮಂಡಳಿ ಸಭೆಯಲ್ಲಿ ಭಾಗವಹಿಸಿದ ಕೊನೆಯ ಪ್ರಧಾನಿ ಮೊರಾರ್ಜಿ ದೇಸಾಯಿ ಆಗಿದ್ದರು. ನಂತರ ಬೇರೆ ಯಾವುದೇ ಪ್ರಧಾನಿ ಭಾಗವಹಿಸಿರಲಿಲ್ಲ. ಅವರೆಲ್ಲರೂ ತುಂಬಾ ಬ್ಯುಸಿಯಾಗಿದ್ದರು. ಆದರೆ ನಾನಿಲ್ಲಿ ಇಲ್ಲಿನ ಜನರಿಗಾಗಿ ಬಂದಿದ್ದೇನೆ ಎಂದು ಪ್ರಧಾನಿ ತಮ್ಮ ಭೇಟಿಯನ್ನು ಉದ್ದೇಶಿಸಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟದ ಅಪರಾಧಿಗಳು ಎಲ್ಲೇ ಅಡಗಿದ್ದರೂ ಹಿಡಿದು ಅವರಿಗೆ ಕಠಿಣ ಶಿಕ್ಷೆ ಕೊಡಿಸುತ್ತೇವೆ: ಅಮಿತ್ ಶಾ

ಪ್ರಧಾನಿ ಮೋದಿ ಭೇಟಿಯಾದ ಸಿಎಂ; ರಾಯಚೂರಿಗೆ ಏಮ್ಸ್, ಪ್ರವಾಹ ಪರಿಹಾರಕ್ಕೆ ಮನವಿ

ದೆಹಲಿ ಸ್ಫೋಟಕ್ಕೂ ಮುನ್ನ ಹಮಾಸ್ ಮಾದರಿಯ ಭೀಕರ ದಾಳಿಗೆ ಯೋಜನೆ ರೂಪಿಸಿದ್ದ ಉಗ್ರರು!

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು, ICU ನಲ್ಲಿ ಚಿಕಿತ್ಸೆ!

ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸುತ್ತಿರುವ ಮದರಸಾ ಶಿಕ್ಷಕ: ಸಿಸಿಟಿವಿ ವಿಡಿಯೋ ವೈರಲ್!

SCROLL FOR NEXT