ನವದೆಹಲಿ: ಬಿಲಿಯನೇರ್ ಆಭರಣ ವಿನ್ಯಾಸಕ ನೀರವ್ ಮೋದಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿಯನ್ನು ಅಪ್ಪಿಕೊಳ್ಳಿ.. 12,000 ಕೋಟಿ ಲೂಟಿ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ.
'ಗೈಡ್ ಟು ಲೂಟ್ ಇಂಡಿಯಾ' ಎಂಬ ಶಿರ್ಶೀಕೆಯಡಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿಯನ್ನು ಅಪ್ಪಿಕೊಳ್ಳಿ, 2. ದಾವೋಸ್‌ನಲ್ಲಿ ಮೋದಿ ಜತೆಗೆ ಕಾಣಿಸಿಕೊಳ್ಳಿ. ಈ ಶಕ್ತಿಯನ್ನು ಬಳಸಿಕೊಂಡು (ಎ) 12,000 ಕೋಟಿ ರುಪಾಯಿ ಲೂಟಿ ಮಾಡಿ; (ಬಿ) ಸರ್ಕಾರ ಬೇರೆ ಕಡೆ ನೋಡುತ್ತಿರುವಾಗ ವಿಜಯ್ ಮಲ್ಯ ರೀತಿ ದೇಶದಿಂದ ಪರಾರಿಯಾಗಿ ಎಂದಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 29ರಂದು ನೀರವ್ ಮೋದಿ ವಿರುದ್ಧ ಪ್ರಕರಣ ದಾಖಲಾಗಿದೆ. ಇದರೆ ಇದಕ್ಕೂ ಮೊದಲೇ ಜನವರಿ ಮೊದಲ ವಾರದಲ್ಲೇ ನೀರವ್ ಮೋದಿ ಕುಟುಂಬ ಸಮೇತ ದೇಶ ತೊರೆದಿದ್ದು, ವಂಚಕನ ವಿರುದ್ಧ ಜಾರಿ ನಿರ್ದೇಶನಾಲಯ ಈಗ ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ.
280.70 ಕೋಟಿಗಳಷ್ಟು ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು ಹತ್ತು ಕಡೆ ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics