ಚೆನ್ನೈ: ರೈಲುಗಳಲ್ಲಿ ಕಾದಿರಿಸಲಾಗುವ ಆಸನದ ವಿವರಗಳನ್ನೊಳಗೊಂಡ ಪಟ್ಟಿ (ಮೀಸಲಾತಿ ಚಾರ್ಟ್) ಯನ್ನು ಆಯಾ ರೈಲುಗಳ ಮೇಲೆ ಬಿತ್ತರಿಸುವ ಕ್ರಮಕ್ಕೆ ಚೆನ್ನೈ ಕೇಂದ್ರವಾಗಿರುವ ದಕ್ಷಿಣ ರೈಲ್ವೆ ಮಂಡಳಿಯು ಕೊನೆ ಹಾಡಲು ತೀರ್ಮಾನಿಸಿದೆ.
ಮಾರ್ಚ್ 1ರಿಂದ, ಎ1,ಎ ಮತ್ತು ಬಿ ದರ್ಜೆಯ ನಿಲ್ದಾಣಗಳಿಂಡ ಹೊರಡುವ ಎಲ್ಲಾ ರೈಲುಗಳಿಲ್ಲಿ ಕಾಯ್ದಿರಿಸಿದವರ ವಿವರಣಾ ಪಟ್ಟಿಯನ್ನು ಅಂಟಿಸುವ ಕ್ರಮವನ್ನು ಹಿಂಪಡೆಯಲು ಮಂಡಳಿ ನಿರ್ಧರಿಸಿದೆ. ಈ ಕ್ರಮ ಮುಂದಿನ ಆರು ತಿಂಗಳ ಕಾಲ ಜಾರಿಯಲ್ಲಿರಲಿದೆ, ಫೆಬ್ರವರಿ 13ರಂದು ದಕ್ಷಿಣ ರೈಲ್ವೆಯ ನಿರ್ದೇಶಕ, ಪ್ಯಾಸೆಂಜರ್ ಮಾರ್ಕೆಟಿಂಗ್ (ರೈಲ್ವೆ ಬೋರ್ಡ್) ನಿರ್ದೇಶಕ ಶೆಲ್ಲಿ ಶ್ರೀವಾಸ್ತವ ಅವರು ಈ ಮೇಲಿನಂತೆ ನಿರ್ದೇಶನ ನಿಡಿದ್ದಾರೆ.
ನಗರ್ಕೋಯಿಲ್, ತಿರುನೆಲ್ವೇಲಿ, ತೂತುಕುಡಿ, ಸೇಲಂ, ಈರೋಡ್ ಸೇರಿ ಅನೇಕ ಕಡೆಗಳಿಂದ ಹೊರಡುವ ಎಕ್ಸ್ ಪ್ರೆಸ್ , ಮೇಲ್, ಶತಾಬ್ದಿ, ಹಂಸಫರ್, ತುರಂತೋ, ರಾಜಧಾನಿ ಮತ್ತು ಗರೀಬ್ ರಥ ಎಕ್ಸ್ ಪ್ರೆಸ್ ರೈಲು ಕಾಯ್ದಿರಿಸುವಿಕೆ ಪಟ್ಟಿಗಳಿಲ್ಲದೆ ಕಾರ್ಯಾಚರಿಸುತ್ತದೆ.
ಚೆನ್ನೈ ಸೆಂಟ್ರಲ್, ನವ ದೆಹಲಿ, ನಿಜಾಮುದ್ದೀನ್, ಬಾಂಬೆ ಸೆಂಟ್ರಲ್, ಹೌರಾ ಮತ್ತು ಸೀಲ್ದಾಹ್ ನಿಲ್ದಾಣಗಳಲ್ಲಿ ಅಕ್ಟೋಬರ್ 2ರಿಂದ ಮೂರು ತಿಂಗಳವರೆಗೆ ಯಾವ ರೈಲುಗಳಿಗೂ ಮೀಸಲಾತಿ ಪಟ್ಟಿಯನ್ನು ಅಂತಿಸದೆ ಕಾರ್ಯಾಚರಣೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಈ ರೀತಿ ದೇಶದ ವಿವಿಧೆಡೆ ಪಟ್ಟಿಗಳಿಲ್ಲದೆ ರೈಲು ಓಡಾಟ ಪ್ರಾರಂಭಿಸುವ ಮುನ್ನವೇ ಚೆನ್ನೈ ರೈಲ್ವೆ ಮಂಡಳಿ ಚೆನ್ನೈ ಎಗ್ಮೋರ್ ಹಾಗೂ ತಮಿಳುನಾಡಿನ ಇನ್ನಿತರೆ ಭಾಗಗಳಿಂದ ಕಾರ್ಯಾಚರಣೆ ಮಾಡುವ ಆಯ್ದ ರೈಲುಗಳ ಮೇಲೆ ಈ ರೀತಿಯ ಪಟ್ಟಿಯಂಟಿಸುವ ಕ್ರಮವನ್ನು ತೆಗೆದು ಹಾಕಿತ್ತು.
ಆದರೆ ತಮಿಳುನಾಡಿನ ನಾಗರಿಕರಿಂಡ ರೈಲ್ವೆ ಮಂಡಳಿಯ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ನಾಗಾಪಟ್ಟಣಂ ಸ್ಟೇಷನ್ ಕನ್ಸಲ್ಟೇಟಿವ್ ಕಮಿಟಿಯ ಸದಸ್ಯ ಜಿ. ಅರವಿಂದ ಕುಮಾರ್ ಹೇಳಿದಂತೆ ಆರ್ ಪಿ ಸಿ ಟಿಕೆಟ್ ದೃಢಪಡಿಸಿದಾಗ, ಐ ಆರ್ ಸಿಟಿಸಿ ಅಥವಾ ಮೊಬೈಲ್ ಅಪ್ಲ್ಕಿಕೇಷನ್ ಮೂಲಕ ಟಿಕೆಟ್ ಬುಕ್ ಮಾಡಿದರೆ ಮಾತ್ರ ಪ್ರಯಾಣಿಕರಿಗೆ ಎಸ್ಎಂಎಸ್ ಸಂದೇಶವನ್ನು ಬರ್ತ್ ಸಂಖ್ಯೆಯೊಂದಿಗೆ ನೀಡಲಾಗುತ್ತದೆ. ರಿಸರ್ವೇಷನ್ ಕೌಂಟರ್ಗಳಲ್ಲಿ ಟಿಕೆಟ್ ಕಾಯ್ದಿರಿಸಿದವರಿಗೆ ಸಿಎನ್ಎಫ್ ಕೋಡ್ ನೊಡನೆ ಸಂದೇಶವು ದೊರೆಯಲಿದೆ, ಬರ್ತ್ ದೃಢೀಕರಿಸಲಾಗಿದೆ ಎಂದು ಇಲ್ಲಿ ಹೇಳಲಾಗಿದ್ದರೂ ಬರ್ತ್ ಸಂಖ್ಯೆ ತಿಳಿಸುವುದಿಲ್ಲ. ರೈಲುಗಳಲ್ಲಿ ಯಾವುದೇ ಚಾರ್ಟ್ ಅಂಟಿಸದಿದ್ದರೆ, ನಾವು ಪ್ರತಿ ಟಿಟಿಇ ಯ ಹಿಂದೆ ಓಡಬೇಕಾಗುವುದು
ತಮಿಳುನಾಡು ಎ 1, ಎ ಮತ್ತು ಬಿ ವಿಭಾಗದಲ್ಲಿ ಒಟ್ಟು 40 ನಿಲ್ದಾಣಗಳನ್ನು ಹೊಂದಿದೆ, ಅದರಲ್ಲಿ - ಚೆನ್ನೈ ಸೆಂಟ್ರಲ್, ಚೆನ್ನೈ ಎಗ್ಮೋರ್, ಕೊಯಂಬತ್ತೂರು ಮತ್ತು ಮಧುರೈ ನಿಲ್ದಾಣಗಳು ಎ 1 ವ್ಯಾಪ್ತಿಯಲ್ಲಿ ಬರುತ್ತದೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos