ನವದೆಹಲಿ: ದೆಹಲಿ ಕಾಂಗ್ರೆಸ್ ಮಾಜಿ ಮುಖಂಡ ಅರವಿಂದ್ ಸಿಂಗ್ ಲವ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಮತ್ತೆ ಮರಳಿದ್ದಾರೆ.
ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಲವ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು, ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕೇನ್ ಜೊತೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಪಕ್ಷಕ್ಕೆ ಮರಳಿದ್ದಾರೆ.
ಪಕ್ಷಕ್ಕೆ ವಾಪಸಾಗಿರುವ ಅರವಿಂದ್ ಸಿಂಗ್ ಲವ್ಲಿ ಅವರಿಗೆ ದೆಹಲಿ ಎಐಸಿಸಿ ಉಸ್ತುವಾರಿ ಪಿಸಿ ಚಾಕೋ ಮತ್ತು ಅಜಯ್ ಮಾಕೇನ್ ಸ್ವಾಗತಿಸಿದ್ದಾರೆ.