ಗುವಾಹಟಿ: ಗುವಾಹಟಿಯ ಕಳ್ಳಸಾಗಣೆ ವಿರೋಧಿ ಕಸ್ಟಮ್ಸ್ ವಿಭಾಗ ಅಂತರರಾಜ್ಯ ಬಸ್ ಟರ್ಮಿನಲ್ ಬಳಿ ಬಹುದೊಡ್ಜ ಚಿನ್ನಕಳ್ಳ ಸಾಗಣೆ ರಾಕೆಟ್ ಅನ್ನು ಭೇದಿಸಿದೆ.
ಇಂಫಾಲದಿಂದ ಮಣಿಪುರಕ್ಕೆ ಬರುತ್ತಿದ್ದ ಇಬ್ಬರು ವ್ಯಕ್ತಿಗಳ ಬಳಿಯಿಂದ ಸುಮಾರು 2.05,90,510 ಕೋಟಿ ರು ಮೌಲ್ಯದ ಚಿನ್ನದ ಬಿಸ್ಕೆಟ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.
6.6 ಕೆಜಿ ತೂಕದ ಈ ಚಿನ್ನದ ಬಿಸ್ಕಟ್ ಗಳು ಮಯನ್ಮಾರ್ ಮೂಲದ್ದಾಗಿದೆ. ಇಂಪಾಲದ ಮೊಹಮದ್ ನಾಸಿರ್ ಖಾನ್, ಮತ್ತು ಶಾಂಘ್ಲಿಯ ಸೋಮನಾಥ್ ಸುಬಾರೋ ಎಂಬ ವ್ಯಕ್ತಗಳನ್ನು ಬಂಧಿಸಲಾಗಿದ್ದು ವಿಚಾರಣೆ ಮುಂದುವರಿದಿದೆ..