ನವದೆಹಲಿ: ದೇಶದ ಅತಿ ದೊಡ್ಡ 21 ರಲ್ಲಿ 17 ರಾಜ್ಯಗಳಲ್ಲಿ ಲಿಂಗಾನುಪಾತ ಪ್ರಮಾಣದಲ್ಲಿ ಕುಸಿತ ಕಂಡಿದೆ. ಗುಜರಾತ್ ನಲ್ಲಿ ದಾಖಲೆಯ 53 ಅಂಕಗಳ ಕುಸಿತ ಕಂಡಿದೆ ಎಂದು ನೀತಿ ಆಯೋಗ ವರದಿಯಲ್ಲಿ ತಿಳಿಸಿದೆ.ಇದಕ್ಕೆ ಆಯ್ದ ಗರ್ಭಪಾತ ಕಾರಣ ಎಂದು ಹೇಳಲಾಗಿದೆ.
ವರದಿಯ ಪ್ರಕಾರ, 17 ರಾಜ್ಯಗಳಲ್ಲಿ 10 ಅಂಕಗಳ ಗಣನೀಯ ಕುಸಿತ ಕಂಡಿದೆ, ಇನ್ನೂ ಗುಜರಾತ್ ನಲ್ಲಿ ಜನನ ಲಿಂಗಾನುಪಾತ ಕುಸಿದಿದ್ದು, 1,000 ಗಂಡುಮಕ್ಕಳಿಗೆ 907 ಹೆಣ್ಣುಮಕ್ಕಳ ಜನನವಾಗುತ್ತಿದೆ. 2012-14 ರಿಂದ 2013-15ನೇ ವರ್ಷಗಳ ಆದಾರದ ಮೇಲೆ ಗುಜರಾತ್ ನಲ್ಲಿ 53 ಅಂಕಗಳು ಕುಸಿತವಾಗಿದೆ.
ಗುಜರಾತ್ ನ ನಂತರ ಹರ್ಯಾಣದಲ್ಲಿ ಜನನ ಲಿಂಗಾನುಪಾತದಲ್ಲಿ 35 ಅಂಕ ಕುಸಿತ ಕಂಡಿದೆ. ರಾಜಸ್ತಾನ-32 ಅಂಕ, ಉತ್ತರಾಖಂಡ್ 27, ಮಹಾರಾಷ್ಟ್ರ- 18, ಹಿಮಾಚಲ ಪ್ರದೇಶ-14, ಛತ್ತೀಸ್ ಗಡ 12 ಹಾಗೂ ಕರ್ನಾಟಕದಲ್ಲಿ 11 ಅಂಕಗಳ ಕುಸಿತ ಕಂಡಿದೆ ಎಂದು ಹೆಲ್ತಿ ಸ್ಟೇಟ್ಸ್, ಪ್ರೊಗ್ರೇಸ್ಸಿವ್ ಇಂಡಿಯಾ ವರದಿ ತಿಳಿಸಿದೆ.
1994ರ ಪೂರ್ವ-ಪರಿಕಲ್ಪನೆ ಮತ್ತು ಪ್ರೀ ನಟಾಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ ಕಾಯಿದೆಯನ್ನು ಕಟ್ಟು ನಿಟ್ಟಾಗಿ ಅಳವಡಿಸುವ ಅವಶ್ಯಕತೆಯಿದೆ, ಹೀಗಾಗಿ ಹೆಣ್ಣು ಮಕ್ಕಳನ್ನು ರಕ್ಷಿಸುವ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಹೇಳಲಾಗಿದೆ.
ವರದಿಯ ಪ್ರಕಾರ, ಪಂಜಾಬ್ ನಲ್ಲಿ 19 ಅಂಕಗಳು ಹೆಚ್ಚಾಗಿದೆ, ಉತ್ತರ ಪ್ರದೇಶದಲ್ಲಿ 10, ಹಾಗೂ ಬಿಹಾರದಲ್ಲಿ 9 ಅಂಕಗಳು ಹೆಚ್ಚಾಗಿದೆ. ಆಯ್ಕೆಯ ಗರ್ಭಪಾತ ಪ್ರಮಾಣ ಕಡಿಮೆ ಮಾಡಿ ಹೆಣ್ಣು ಮಕ್ಕಳ ಜನನ ಸಂಖ್ಯೆಯಲ್ಲಿ ಏರಿಸಬೇಕೆಂದು ಈ ಜನನ ಲಿಂಗಾನುಪಾತ ವರದಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics