ಪಾಕಿಸ್ತಾನದ ಬಿಎಟಿ ದಾಳಿ ವಿಫಲಗೊಳಿಸಿದ ಸೇನೆ: ಓರ್ವ ಉಗ್ರನ ಹತ್ಯೆ, 3 ಯೋಧರಿಗೆ ಗಾಯ
ಗಡಿಯಲ್ಲಿ ನಿರಂತರ ಪುಂಡಾಟಿಕೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಫೆ.19 ರಂದೂ ತಕ್ಕ ಪಾಠ ಕಲಿಸಿದೆ. ಎಲ್ಒಸಿಯಲ್ಲಿ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಂ ನ ದಾಳಿಯನ್ನು ವಿಫಲಗೊಳಿಸುವಲ್ಲಿ
ಶ್ರೀನಗರ: ಗಡಿಯಲ್ಲಿ ನಿರಂತರ ಪುಂಡಾಟಿಕೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಫೆ.19 ರಂದೂ ತಕ್ಕ ಪಾಠ ಕಲಿಸಿದೆ. ಎಲ್ಒಸಿಯಲ್ಲಿ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಂ ನ ದಾಳಿಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿರುವ ಭಾರತೀಯ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡಿದೆ.
ಭಯೋತ್ಪಾದಕರು ಹಾಗೂ ಸೇನಾ ಸಿಬ್ಬಂದಿಗಳ ನಡುವಿನ ಗುಂಡಿನ ಕಾಳಗದಲ್ಲಿ 3 ಯೋಧರಿಗೆ ಗಾಯಗಳುಂಟಾಗಿದ್ದು, ಇಬ್ಬರು ಭಯೋತ್ಪಾದಕರಿಗೂ ಗಾಯಗಳುಂಟಾಗಿದೆ. ಜಮ್ಮುವಿನ ಕರ್ನಲ್ ದೇವೇಂದರ್ ಆನಂದ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸೇನೆ ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಲು ಮುಂದಾಯಿತು, ಅದೇ ಮಾದರಿಯ ಶಸ್ತ್ರಾಸ್ತ್ರಗಳಿಂದ ಭಾರತೀಯ ಸೇನೆ ಸಹ ಪಾಕ್ ಗೆ ಪ್ರತ್ಯುತ್ತರ ನೀಡಿದ್ದು ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದು ಗುಂಡಿನ ದಾಳಿಯಲ್ಲಿ ಗಾಯಗೊಂಡ ಯೋಧನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.