ಭುವನೇಶ್ವರ್: ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಒಡಿಯಾ ನಟಿ ಅಪರಾಜಿತಾ ಮೊಹಂತಿ ಬಿಜೆಪಿ ಸೇರಿದ್ದಾರೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಅಪರಾಜಿತಾ ಮೊಹಂತಿ ಅವರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
2014ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ್ದ ಅಪರಾಜಿತಾ ಅವರು ಕಳೆದ ಫೆಬ್ರವರಿ 13ರಂದು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಕಟಕ್ ನಿಂದ ಸ್ಪರ್ಧಿಸಿದ್ದ ಅಪರಾಜಿತಾ ಮೊಹಂತಿ ಅವರು ಬಿಜು ಜನತಾದಳ(ಬಿಜೆಡಿ)ದ ಅಭ್ಯರ್ಥಿ ಭಾತ್ರೃಹರಿ ಮಹಾತಾಬ್ ವಿರುದ್ಧ ಸೋಲು ಕಂಡಿದ್ದರು.