ದೇಶ

ಮದುವೆ ಮನೆಯಲ್ಲಿ ಕ್ಯಾರೆಟ್ ಹಲ್ವ ಸೇವಿಸಿ 100 ಕ್ಕೂ ಹೆಚ್ಚು ಮಂದಿ ಅಸ್ವಸ್ಛ

Shilpa D
ಪಲ್ಗಾರ್: ವಿವಾಹ ಸಮಾರಂಭದಲ್ಲಿ ಸಿಹಿ ತಿಂಡಿ ತಿಂದ ಸುಮಾರು 105 ಮಂದಿ ಅಸ್ವಸ್ಥರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಿಹಿತಿಂಡಿಯು ವಿಷಾಹಾರವಾಗಿ ಪರಿವರ್ತಿತವಾಗಿರಬಹುದು ಎಂದವರು ಶಂಕೆ ವ್ಯಕ್ತಪಡಿಸಿದ್ದಾರೆ.
ಮದುವೆ ಊಟದಲ್ಲಿ ಕ್ಯಾರೆಟ್‌ ಹಲ್ವ ತಿಂದ ಈ 105 ಮಂದಿಗೆ ತಲೆ ಸುತ್ತಿ ಬಂದು ವಾಂತಿ ಮಾಡಲು ಆರಂಭಿಸಿದರು. ಒಡನೆಯೇ ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 
ವಿಷಾಹಾರದ ಮಾದರಿಯನ್ನು  ಪರಿಶೀಲಿಸಲು ಆಹಾರ ಮತ್ತು ಔಷಧ ಪ್ರಯೋಗಾಲದ ಅಧಿಕಾರಿಗಳು ಒಯ್ದಿದ್ದಾರೆ. ಪೊಲೀಸರು ಈ ತನಕ ಯಾವುದೇ ಕೇಸು ದಾಖಲಿಸಿಕೊಂಡಿಲ್ಲ. ಆದರೆ ತನಿಖೆ ಜಾರಿಯಲ್ಲಿದೆ ಎನ್ನಲಾಗಿದೆ. 
SCROLL FOR NEXT