ಅಮೃತಸರ: ಪಂಜಾಬಿನ ಫಿರೋಜ್ ಪುರ್ ವಲಯದ ಭಾರತ ಮತ್ತು ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಓರ್ವ ಮಾದಕ ದ್ರವ್ಯ ಕಳ್ಳಸಾಗಾಟಗಾರನನ್ನು ಗುಂಡಿಕ್ಕಿ ಹತ್ಯೆ ಮಾಡಿ ಆತನ ಬಳಿ ಇದ್ದ 10 ಕಿಲೋ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಬಿಎಸ್ಎಫ್ ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಪಂಜಾಬ್ ನ ವಿಶೇಷ ಕಾರ್ಯಪಡೆ ಜತೆ ಬಿಎಸ್ಎಫ್ ಯೋಧರು ಕಳ್ಳಸಾಗಾಟಗಾರರು ಮತ್ತು ಒಳನುಸುಳುಕೋರರ ವಿರುದ್ಧ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಪಾಕ್ ಮಾದಕ ದ್ರವ್ಯಸಾಗಣೆಕೋರನೊಬ್ಬನನ್ನು ಹತ್ಯೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಗಡಿಯೊಳಗೆ ಇಬ್ಬರು ಪಾಕ್ ಮಾದಕ ದ್ರವ್ಯ ಕಳ್ಳಸಾಗಾಟಗಾರರು ನುಸುಳುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆ ಯೋಧರು ಒಡನೆಯೇ ಕಾರ್ಯಾಚರಣೆ ನಡೆಸಿ ಒಬ್ಬಾತನನ್ನು ಹೊಡೆದುರುಳಿಸಿದ್ದು ಮತ್ತೋರ್ವ ಪಲಾಯನ ಮಾಡಿದ ಎಂದು ಸೇನಾ ಮೂಲಗಳು ತಿಳಿಸಿವೆ.