ನವದೆಹಲಿ: 11 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 3 ನೌಕರರನ್ನು ಸಿಬಿಐ ಬಂಧಿಸಿದೆ.
ವಿದೇಶಿ ವಿನಿಮಯ ವಿಭಾಗದ ಉಸ್ತುವಾರಿ ಹಾಗೂ ಮುಂಬೈ ನಾರಿಮನ್ ಪಾಯಿಂಟ್ ಶಾಖೆಯ ಚೀಫ್ ಮ್ಯಾನೇಜರ್ ಬಿಚ್ಚು ತಿವಾರಿ, ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಗೋಕುಲ್ ನಾಥ್ ಶೆಟ್ಟಿ (ಕಳೆದ ವಾರ ಸಿಬಿಐ ನಿಂದ ಬಂಧನ) ಹಾಗೂ ಆತನ ಮ್ಯಾನೇಜರ್ ನ ಕೆಲಸಗಳನ್ನು ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯನ್ನೂ ತಿವಾರಿ ಹೊತ್ತಿದ್ದರು.
ವಿದೇಶಿ ವಿನಿಮಯದ ಸ್ಕೇಲ್ II ಮ್ಯಾನೇಜರ್ ಯಶ್ವಂತ್ ಜೋಷಿ ಅವರನ್ನೂ ಸಿಬಿಐ ಬಂಧಿಸಿದ್ದು ಸ್ವಿಫ್ಟ್ ಹಾಗೂ ಸಿಬಿಎಸ್ ನ ದಿನನಿತ್ಯದ ವರದಿಗಳನ್ನು ನಿರ್ವಹಣೆ ಮಾಡುತ್ತಿದ್ದರು, ಗೋಕುಲ್ ಶೆಟ್ಟಿಯ ಅಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಇನ್ನು ರಫ್ತು ವಿಭಾಗದ ಸ್ಕೇಲ್ I ಅಧಿಕಾರಿ ಪ್ರಫುಲ್ ಸಾವಂತ್ ನ್ನೂ ಬಂಧಿಸಲಾಗಿದ್ದು, ಪ್ರತಿದಿನವೂ ಸ್ವಿಫ್ಟ್ ಮೆಸೇಜ್ ಹಾಗೂ ವರದಿಗಳನ್ನು ಪರಿಶೀಲಿಸುತ್ತಿದ್ದ ಜವಾಬ್ದಾರಿ ಹೊಂದಿದ್ದರು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.