ನವದೆಹಲಿ: ಭೂತಾನ್ ನಿಂದ ಭಾರತೀಯರನ್ನು ಬೇರ್ಪಡಿಸುವ ಸಲುವಾಗಿ ಚೀನಾ ಡೊಕ್ಲಾಮ್ ನಲ್ಲಿ ಹಸ್ತಕ್ಷೇಪವನ್ನು ನಡೆಸುತ್ತಿದೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವ ಶಂಕರ್ ಮೆನನ್ ಹೇಳಿದ್ದಾರೆ.
ಈಶಾನ್ಯ ಭಾರತದ ಬ್ರಿಡ್ಜಿಂಗ್ ಗ್ಯಾಪ್ ಆಂಡ್ ಸೆಕ್ಯುಇಂಗ್ ಬಾರ್ಡರ್ ಶ್ಂಗಸಭೆಯಲ್ಲಿ ಮಾತನಾಡಿದ ಮೆನನ್ "ಕಳೆದ ವರ್ಷ ಚೀನಾ ಡೊಕ್ಲಾಮ್ ವಿಚಾರದಲ್ಲಿ ವ್ಯಥಾ ವಿವಾದ ಸೃಷ್ಟಿಸಿದ್ದನ್ನು ನಾವು ಕಂಡಿದ್ದೇವೆ. ಇದರ ಹಿಂದೆ ಚೀನಾದ ರಾಜಕೀಯ ಲೆಕ್ಕಾಚಾರವಿದೆ. ಭೂತಾನಿಗಳಿಂದ ಭಾರತೀಯರನ್ನು ಬೇರ್ಪಡಿಸುವ ಗುರಿಯನ್ನು ಚೀನಾ ಹೊಂದಿದೆ. ಇದಕಾಗಿ ಚೀನಾವು ಡೋಕ್ಲಾಮ್ ವಿಚಾರವನ್ನು ದಾಳದಂತೆ ಬಳಸಿಕೊಳ್ಳುತ್ತಿದೆ" ಎಂದು ಹೇಳಿದ್ದಾರೆ.
ಚೀನಾ ಆರ್ಥಿಕವಾಗಿಯೂ, ಸೈನ್ಯ ಶಕ್ತಿಯ ದೃಷ್ಟಿಯಿಂದಲೂ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ. ಈಶಾನ್ಯ ಭಾಗಗಳಲ್ಲಿ ಚೀನಾ ದಿನ ದಿನಕ್ಕೆ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ ಎಂದು ಭಾರತ ನೌಕಾದಳದ ನಾಯಕ ಅಡ್ಮಿರಲ್ ಸುನೀಲ್ ಲಂಬಾ ಎಚ್ಚರಿಸಿದ್ದಾರೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ನ ಉದ್ದಕ್ಕೂ ಚೀನಾ ಸೇನೆ ನಿಯಮ ಬಾಹಿರವಾಗಿ ನುಗ್ಗಿ ಬರುತ್ತಿದೆ. ಈಶಾನ್ಯದ ಹಲವಾರು ರಾಜ್ಯಗಳು ಚೀನಾದೊಡನೆ ಗಡಿ ಹಂಚಿಕೊಂಡಿದ್ದು ಕಳೆದ ಹಲವಾರು ವರ್ಷಗಳಿಂದ ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದರು ಎಂದು ಲಂಬಾ ಹೇಳಿದರು.
ಸಿಲಿಗುರಿ ಕಾರಿಡಾರ್ ಬಗೆಗೆ ಹೇಳುತ್ತಾ ಲಂಬಾ "ಚೀನಾ ದಿನ ದಿನಕ್ಕೆ ತನ್ನ ಸೇನಾ ಶಕ್ತಿ ಹಾಗೂ ಆರ್ಥಿಕತೆಯನ್ನು ವೃದ್ದಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ
.ಚಿಕನ್ಸ್ ನೆಕ್ ಎಂದು ಕರೆಯಲ್ಪಡುವ ಸಿಲಿಗುರಿ ಕಾರಿಡಾರ್ ಯೋಜನೆಯು ಈಶಾನ್ಯ ರಾಜ್ಯಗಳನ್ನು ಭಾರತದ ಇತರೆ ಭಾಗಗಳೊಡನೆ ಸಂಪರ್ಕಿಸುವ ಮಹತ್ವದ ಯೋಜನೆಯಾಗಿದೆ.