ದೇಶ

ಅಭಿವೃದ್ಧಿಗೆ ಸಾಮರ್ಥ್ಯ, ನೀತಿ, ಯೋಜನೆ, ನಿರ್ವಹಣೆ ಪ್ರಮುಖ ಅಂಶಗಳು: ಪ್ರಧಾನಿ ಮೋದಿ

Lingaraj Badiger
ನವದೆಹಲಿ: ಸಾಮರ್ಥ್ಯ, ನೀತಿ, ಯೋಜನೆ ಮತ್ತು ನಿರ್ವಹಣೆ ಸಮರ್ಪಕವಾಗಿದ್ದರೆ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.
ಇಂದು ಉತ್ತರ ಪ್ರದೇಶ ಹೂಡಿಕೆದಾರರ ಸಮ್ಮೇಳನ 2018 ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯನ್ನು ಹಾಡಿ ಹೊಗಳಿದರು. ಅಲ್ಲದೆ ಯೋಗಿ ಆದಿತ್ಯನಾಥ್ ರ ಈ ಯೋಜನೆ ಸೂಪರ್ ಹಿಟ್ ಆಗಲಿದೆ ಎಂದರು.
ಸಾಮರ್ಥ್ಯ + ನೀತಿ + ಯೋಜನೆ + ನಿರ್ವಹಣೆ ಅಭಿವೃದ್ಧಿಯನ್ನು ಮುನ್ನಡೆಸಲಿದೆ. ಈಗ ಉತ್ತರ ಪ್ರದೇಶ ಸರ್ಕಾರ ಸಹ ಅಂತಹ ಸೂಪರ್ ಹಿಟ್ ನಿರ್ವಹಣೆಗೆ ಸಿದ್ಧವಾಗಿದೆ ಎಂದರು.
ಉತ್ತರ ಪ್ರದೇಶ ಸರ್ಕಾ ವಿಭಿನ್ನ ವಲಯಗಳಿಗೆ ವಿಭಿನ್ನವಾದ ನೀತಿಯನ್ನು ರೂಪಿಸುತ್ತಿದೆ. ಉದಾಹರಣೆಗೆ, ಕೈಗಾರಿಕಾ ಹೂಡಿಕೆಯನ್ನು ಉದ್ಯೋಗ ಅವಕಾಶಗಳೊಂದಿಗೆ ವಿಲೀನ ಮಾಡಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಗೇಮ್ ಚೇಂಜರ್ ಎಂದು ಪ್ರಧಾನಿ ಹೇಳಿದರು.
ಯೋಗಿ ಆದಿತ್ಯನಾಥ್ ಸರ್ಕಾರ ರೈತರಿಗೆ, ಮಹಿಳೆಯರಿಗೆ ಮತ್ತು ರಾಜ್ಯದ ಯುುವಕರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆ ಎಂದರು.
SCROLL FOR NEXT