ದೇಶ

ಇತಿಹಾಸ ನಿರ್ಮಿಸಿದ ಅವನಿ ಚತುರ್ವೇದಿ; ಯುದ್ಧ ವಿಮಾನ ಚಲಾಯಿಸಿದ ಮೊದಲ ಮಹಿಳಾ ಪೈಲಟ್

Sumana Upadhyaya

ಜಮ್ನಗರ್: ಯುದ್ಧ ವಿಮಾನವನ್ನು ಚಲಾಯಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವಕ್ಕೆ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ ಪಾತ್ರರಾಗಿದ್ದಾರೆ.

ಯುದ್ಧವಿಮಾನವನ್ನು ಚಲಾಯಿಸಿದ ಮೊದಲ ಮಹಿಳಾ ಚಾಲಕಿ ಎಂಬ ಇತಿಹಾಸವನ್ನು ಅವನಿ ಚತುರ್ವೇದಿ ನಿರ್ಮಿಸಿದ್ದು, ಮಿಗ್ 21 ಬೈಸನ್ ವಿಮಾನವನ್ನು ಏಕಾಂಗಿಯಾಗಿ ಚಲಾಯಿಸಿದ್ದಾರೆ ಎಂದು ಭಾರತೀಯ ವಾಯುಪಡೆಯ ಸಿಬ್ಬಂದಿ ಹೇಳಿದ್ದಾರೆ.
ಗುಜರಾತ್ ನ ಜಮ್ನಗರದ ತರಬೇತಿ ಕೇಂದ್ರದಿಂದ ಯುದ್ಧವಿಮಾನವನ್ನು ಚಲಾಯಿಸಿದರು ಎಂದು ಹೇಳಿದ್ದಾರೆ.

ಇದು ದೇಶಕ್ಕೆ ಮತ್ತು ಭಾರತೀಯ ವಾಯುಪಡೆಗೆ ಅವನಿಯವರು ನೀಡಿದ ವಿಶಿಷ್ಟ ಕೊಡುಗೆ ಎಂದು ಏರ್ ಕಮಾಂಡರ್ ಪ್ರಶಾಂತ್ ದೀಕ್ಷಿತ್ ತಿಳಿಸಿದ್ದಾರೆ.

ವಿಶ್ವದಲ್ಲಿ ಮಿಗ್-21 ಬೈಸನ್ ಯುದ್ಧ ವಿಮಾನ ಅತಿ ವೇಗವಾಗಿ ಹಾರಾಡುವ ಯುದ್ಧ ವಿಮಾನವಾಗಿದ್ದು ಪ್ರತಿ ಗಂಟೆಗೆ 340 ಕಿಲೋ ಮೀಟರ್ ವೇಗವಾಗಿ ಹಾರಾಟ ನಡೆಸುತ್ತದೆ.
ಮಧ್ಯ  ಪ್ರದೇಶದ ರೇವ ಜಿಲ್ಲೆಯವರಾದ ಅವನಿ ತನ್ನ ಜೊತೆ ಮತ್ತಿಬ್ಬರು ಮಹಿಳಾ ಪೈಲಟ್ ಗಳಾದ ಮೋಹನ ಸಿಂಗ್ ಮತ್ತು ಭಾವನ ಕಾಂತ್ ಅವರ ಜೊತೆ ಭಾರತೀಯ ವಾಯುಪಡೆಗೆ ಸೇರಿದ ಯುದ್ಧ ವಿಮಾನ ಪೈಲಟ್ ಗಳಾಗಿದ್ದಾರೆ.

ಇವರು ಮೂವರು 2016, ಜೂನ್ 18ರಂದು ಭಾರತೀಯ ವಾಯುಪಡೆಯ ಯುದ್ಧ ವಿಮಾನ ತಂಡಕ್ಕೆ ಸೇರಿದ್ದರು.

SCROLL FOR NEXT