ದೇಶ

ರಾಜಕಾರಣಿಗಳು ದೇವರಲ್ಲ, ಕಾನೂನಿಗಿಂತ ದೊಡ್ಡವರಲ್ಲ: ಬಾಂಬೆ ಹೈ ಕೋರ್ಟ್

Sumana Upadhyaya

ಮುಂಬೈ: ರಾಜಕಾರಣಿಗಳು ದೇವರಿಗಿಂತ ಮತ್ತು ಕಾನೂನಿಗಿಂತ  ದೊಡ್ಡವರಲ್ಲ, ಹೀಗೆಂದು ಹೇಳಿದ್ದು ಮುಂಬೈ ಹೈಕೋರ್ಟ್. ಮಾವಿನ ತೋಟಗಳನ್ನು ಹೊಂದಿದ ಜಾಗವನ್ನು ಅತಿಕ್ರಮಣ ಮಾಡಿದ ಇಬ್ಬರು ಕಾರ್ಪೊರೇಟರ್ ಗಳ ವಿರುದ್ಧ ಕೇಸು ದಾಖಲಿಸುವಂತೆ ಮಹಾರಾಷ್ಟ್ರ ಪೊಲೀಸರಿಗೆ ಆದೇಶ ನೀಡಿದ ಮುಂಬೈ ಹೈಕೋರ್ಟ್ ಈ ರೀತಿ ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್ ಸಿ ದರಮದ್ಹಿಕಾರಿ ಮತ್ತು ಭರತಿ ದಂಗ್ರೆ ಅವರನ್ನೊಳಗೊಂಡ ನ್ಯಾಯಪೀಠ, ಮಿರಾ ರೈಡ್ ಪೊಲೀಸ್ ಠಾಣೆಗೆ ಆದೇಶ ನೀಡಿ, ಬಿಜೆಪಿಯ ಕಾರ್ಪೊರೇಟರ್ ಪರಶುರಾಮ್ ಮಾಟ್ರೆ ಮತ್ತು ಶಿವಸೇನೆಯ ಅನಿತಾ ಪಾಟೀಲ್ ಅವರ ವಿರುದ್ಧ ಒಂದು ವಾರದೊಳಗೆ ಪರಿಸರ ರಕ್ಷಣೆ ಕಾಯ್ದೆಯಡಿ ಕೇಸು ದಾಖಲಿಸುವಂತೆ ಸೂಚಿಸಿದೆ.

ರಾಜಕೀಯ ನಾಯಕರು ಕಾನೂನಿಗಿಂತ ಮೇಲು ಅಲ್ಲ, ಅವರು ದೇವರಲ್ಲ ಅಥವಾ ಕಾನೂನನ್ನು ಮುರಿಯುವ ಹಕ್ಕು ಹೊಂದಿರುವವರಲ್ಲ. ನಗರಪಾಲಿಕೆ ಮತ್ತು ಸ್ಥಳೀಯ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಏಕೆ ಹೆದರಬೇಕು? ನೀವು ಧೈರ್ಯವಾಗಿರಬೇಕು, ಯಾರಿಗೂ ಹೆದರಬಾರದು ಎಂದು ನ್ಯಾಯಮೂರ್ತಿಗಳು ಹೇಳಿದರು.
ಭರತ್ ಮೊಕಲ್ ಎಂಬ ಕಾರ್ಯಕರ್ತ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನ್ಯಾಯಪೀಠ  ಹೀಗೆ ಆದೇಶ ನೀಡಿದೆ.

ಮಾವಿನ ತೋಟಗಳನ್ನು ಅಕ್ರಮವಾಗಿ ವಶಪಡಿಸಿಕೊಂಡು ಕಡಿದು ಮಾಟ್ರೆ ಮತ್ತು ಪಾಟೀಲ್ ಅಲ್ಲಿ ತಮ್ಮ ಬೃಹತ್ ಬಂಗಲೆಗಳನ್ನು ನಿರ್ಮಿಸಿದ್ದರು.

SCROLL FOR NEXT