ಮುಂಬೈ; ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದ ಬಳಿಕ ಕೊನೆಗೂ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದೇ ಹೇಳಲಾಗುವ 'ಎಲಿಫಾಂಟಾ ಗುಹೆ'ಗಳಿಗೆ ವಿದ್ಯುತ್ ಪೂರೈಕೆಯನ್ನು ಸರಬರಾಜು ಮಾಡಲಾಗಿದೆ.
ಗೇಟ್ ವೇ ಆಫ್ ಇಂಡಿಯಾದಿಂದ 12 ಕಿ.ಮೀ ಗಳಷ್ಟು ದೂರದಲ್ಲಿ ಎಲಿಫಾಂಟಾ ಎಂಬ ಗುಹೆಯಿದ್ದು. ಇದು ವಿಶ್ವಪ್ರಸಿದ್ಧವಾಗಿದೆ. ಈ ಗುಹೆಯನ್ನು ಇಲ್ಲಿದ್ದ ಪರ್ವತಗಳನ್ನು ಕತ್ತರಿಸುವ ಮೂಲಕ ತಯಾರಿಸಲಾಗಿದ್ದು, ಸುಮಾಹು 7 ಗುಹೆಗಳು ಇಲ್ಲಿವೆ. ಈ ಗುಹೆ ಸಂಕೀರ್ಣಕ್ಕೆ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನವನ್ನು ನೀಡಲಾಗಿದೆ.
ಹಲವು ವರ್ಷಗಳ ಬಳಿಕ ಎಲಿಫಾಂಟಾ ಗುಹೆಗಳಿಗೆ ವಿದ್ಯುತ್ ಪೂರೈಕೆಗೊಂಡಿದ್ದು, ಸಮುದ್ರದಲ್ಲಿ 7.5ಕಿ.ಮೀ ಉದ್ದದ ಕೇಬಲ್'ನ್ನು ಸ್ಥಾಪಿಸುವ ಮೂಲಕ ,ಮುಂಬೈನಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಎಲೆಫೆಂಟಾ ಗುಹೆಗೆ ವಿದ್ಯುಚ್ಛಕ್ತಿ ಒದಗಿಸಲಾಗಿದ್ದು, ಇದನ್ನು ಐತಿಹಾಸಿಕ ದಿನವೆಂದು ಇಂಧನ ಸಚಿವ ಚಂದ್ರಶೇಖರ್ ಬಾವನ್ಕುಲೆ ಅವರು ಹೇಳಿದ್ದಾರೆ.
ಬೃಹತ್ ಲಯವನ್ನು ಬಳಸಿಕೊಂಡು ಅರಬ್ಬಿ ಸಮುದ್ರದಲ್ಲಿ ವಿದ್ಯುತ್ ಸರಬರಾಜು ಮಾಡಿರುವುದು ಇದೇ ಮೊದಲು ಅವರು ತಿಳಿಸಿದ್ದಾರೆ.
ಸರ್ಕಾರದ ಈ ಕ್ರಮ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲಿದ್ದು, ವಿಶ್ವಪಾರಂಪರಿಕ ತಾಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಇನ್ನುಮುಂದೆ ಮತ್ತಷ್ಟು ಹೆಚ್ಚಲಿದೆ. ಸರ್ಕಾರದ ಈ ಕಾರ್ಯ ರಾಜ್ ಬಂದರ್, ಮೊರಾ ಬಂದಕ್ ಮತ್ತು ಶೆಟ್ ಬಂದರ್ ಎಂಬ ಮೂರು ಗ್ರಾಮಗಳಿಗೆ ಸಹಾಯಕವಾಗಿದೆ ಎಂದಿದ್ದಾರೆ.