ದೇಶ

ವಾಟ್ಸ್ ಆಪ್ ಗ್ರೂಪ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಹಂಚಿಕೆ: ಸಿಬಿಐ ನಿಂದ ಐವರ ಬಂಧನ

Srinivas Rao BV

ನವದೆಹಲಿ: ವಾಟ್ಸ್ ಆಪ್ ಮೂಲಕ ಮಕ್ಕಳ ಅಶ್ಲೀಲ ಚಲನಚಿತ್ರಗಳನ್ನು ಹಂಚಿಕೆ ಮಾಡುತ್ತಿದ್ದ 5 ಜನರ ತಂಡವನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ದೇಶ ಹಾಗೂ ವಿದೇಶಗಳಿಂದ 119 ಸದಸ್ಯರಿದ್ದ ವಾಟ್ಸ್ ಆಪ್ ಗ್ರೂಪ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ಸಿಬಿಐ ಪೊಲೀಸರು ಈ ದುಷ್ಕೃತ್ಯದಲ್ಲಿ ತೊಡಗಿದ್ದ ಸದಸ್ಯರನ್ನು ಬಂಧಿಸಿದ್ದಾರೆ.

ಕಿಡ್ಸ್ XXX ಎಂಬ ವಾಟ್ಸ್ ಆಪ್ ಗ್ರೂಪ್ ನಲ್ಲಿ ಅಮೆರಿಕ, ಚೀನಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ, ಬ್ರೆಜಿಲ್, ಕೀನ್ಯ, ನೈಜೀರಿಯಾ, ಮೆಕ್ಸಿಕೋ ನ್ಯೂಜಿಲ್ಯಾಂಡ್ ಹಾಗೂ ಭಾರತದ ವಾಟ್ಸ್ ಆಪ್ ಬಳಕೆದಾರರೂ ಇದ್ದರು.

ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿರುವ ಸಿಬಿಐ ವಾಟ್ಸ್ ಆಪ್ ಗ್ರೂಪ್ ನ ಆಡ್ಮಿನ್ ಗಳಾದ ನಿಖಿಲ್ ವರ್ಮಾ(ಉತ್ತರ ಪ್ರದೇಶ), ಸತ್ಯೇಂದ್ರ ಓಂಪ್ರಕಾಶ್(ಮುಂಬೈ)  ಚೌಹಾಣ್, ನಫೀಜ್ ರಾಜಾ(ನವದೆಹಲಿ), ಜಾಹಿದ್(ನವದೆಹಲಿ) ಹಾಗೂ ಆದರ್ಶ್(ಉತ್ತರ ಪ್ರದೇಶ) ಎಂಬುವವರನ್ನು ಬಂಧಿಸಿದ್ದು, 5 ಜನರ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 67-ಬಿ ಅಡಿಯಲ್ಲಿ ಫೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

SCROLL FOR NEXT