ಒಡಿಶಾ: ಗಿಫ್ಟ್ ಪಾರ್ಸಲ್ ನಲ್ಲಿದ್ದ ಬಾಂಬ್ ಸ್ಫೋಟಗೊಂಡು ವರ ಮೃತಪಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಫೆ.23 ರಂದು ಈ ಘಟನೆ ಬೆಳಕಿಗೆ ಬಂದಿದ್ದು, ಫೆ.18 ರಂದು ವಿವಾಹವಾಗಿದ್ದ ವ್ಯಕ್ತಿ ತಮಗೆ ಬಂದಿದ್ದ ಉಡುಗೊರೆಗಳನ್ನು ತೆಗೆದು ನೋಡುತ್ತಿದ್ದರು. ಈ ವೇಳೆ ತಮಗೆ ಅನಾಮಿಕ ವ್ಯಕ್ತಿಯೊಬ್ಬರು ಕಳಿಸಿದ್ದ ಗಿಫ್ಟ್ ಪಾರ್ಸಲ್ ನ್ನು ತೆಗೆದು ನೋಡಿದಾಗ ಅದರೊಳಗಿದ್ದ ಬಾಂಬ್ ಸ್ಫೋಟಗೊಂಡು ವರ ಹಾಗೂ ಆತನ ಅಜ್ಜಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.
ಒಡಿಶಾದ ಬ್ರಹ್ಮಪುರ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಘಟನೆ ನಡೆಯುತ್ತಿದ್ದಂತೆಯೇ ತೀವ್ರವಾಗಿ ಗಾಯಗೊಂಡಿದ್ದ ವರ ಹಾಗೂ ಆತನ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಹ ಇಬ್ಬರು ಬದುಕುಳಿಯಲಿಲ್ಲ
ಇನ್ನು ಗಾಯಗೊಂಡ ವಧುವನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.