ವಿದೇಶದಲ್ಲಿ ವೈದ್ಯಕೀಯ ಕೋರ್ಸ್ ಮಾಡಲು ನೀಟ್ ಕಡ್ಡಾಯ; ಮೇ 2018ರಿಂದ ಅನ್ವಯ
ನವದೆಹಲಿ: 2018ರ ಮೇ ಅಥವಾ ನಂತರದ ದಿನಗಳಲ್ಲಿ ವಿದೇಶಗಳಲ್ಲಿ ವೈದ್ಯಕೀಯ ಪದವಿ ಹೊಂದಲು ಬಯಸುವ ಭಾರತೀಯ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ (ನೀಟ್) ಉತ್ತೀರ್ಣರಾಗುವುದು ಕಡ್ಡಾಯ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
2016ರಿಂದ ಭಾರ್ತದಲ್ಲಿ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಿಂದ ವೈದ್ಯಕೀಯ ಪದವಿ ಪಡೆಯಬಯಸುವ ಅಭ್ಯರ್ಥಿಗಳು ನೀಟ್ ಪರೀಕ್ಷೆ ಉತ್ತೀರ್ಣರಾಗುವುದು ಕಡ್ಡಾಯವೆಂದು ಸರ್ಕಾರ ನಿಯಮ ರೂಪಿಸಿತ್ತು. ಇದೀಗ ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬಯಸುವ ಅಭ್ಯರ್ಥಿಗಳು ಸಹ ನೀಟ್ ಪರೀಕ್ಷೆ ಬರೆಯಬೇಕೆಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಆದರೆ ಯಾರು ಇದಾಗಲೇ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅರ್ಹತಾ ಪ್ರಮಾಣಪತ್ರ ಪಡೆದು ಪ್ರಸ್ತುತ ನಿಯಮಗಳನುಸಾರ ವೈದ್ಯಕೀಯ ಪದವಿಗೆ ಸೇರಿದ್ದಾರೆಯೋ ಅವರಿಗೆ ನೀಟ್ ಪರೀಕ್ಷಾ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಲಾಗಿದೆ.
"2018ರ ಮೇ ಅಥವಾ ನಂತರ ಭಾರತದ ವಿದ್ಯಾರ್ಥಿಗಳಾರೇ ಆದರೂ ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ಪದವಿಗೆ ಸೇರಬೇಕಾದರೆ ನೀಟ್ ಪರೀಕ್ಷೆ ಬರೆಯುವುದು ಕಡ್ಡಾಯ. ಹಾಗೆಯೇ ವಿದೇಶದಲ್ಲಿ ನೆಲೆಸಿದ ಬಾರತೀಯರು ಭಾರತದ ವಿಶ್ವವಿದ್ಯಾನಿಲಯಗಳಿಂದ ವೈದ್ಯಕೀಯ ಪದವಿ ಪಡೆಯಲು ಸಹ ನೀಟ್ ಪರೀಕ್ಷೆ ಉತ್ತೀರ್ಣರಾಗಬೇಕು ಎಂದು ಸಚಿವಾಲಯದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics