ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಸಮೂಹದ ರೂ.523 ಕೋಟಿ ಬೆಲೆ ಐಶಾರಾಮಿ ಮನೆಗಳು, ಜಮೀನುಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಮೀನನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ)ಯಡಿ ಕೇಂದ್ರ ತನಿಖಾ ಎಜೆನ್ಸಿ ನೀರವ್ ಮೋದಿಗೆ ಸೇರಿದ ಮುಂಬೈನ ವೊರ್ಲಿ ಪ್ರದೇಶದಲ್ಲಿರುವ ಸಮುದ್ರ ಮಹಲ್ ಅಪಾರ್ಟ್ ಮೆಂಟ್ ನಲ್ಲಿನ 81.16 ಕೋಟಿ ಮೌಲ್ಯದ ಐಶಾರಾಮಿ ಪೆಂಟ್ ಹೌಸ್ ಮತ್ತು 15.45 ಕೋಟಿ ಮೌಲ್ಯದ ಫ್ಲಾಟ್ ಅನ್ನು ವಶಪಡಿಸಿಕೊಂಡಿದೆ.
ನೀರವ್ ಮೋದಿ ಮತ್ತು ಆತನ ಸಂಸ್ಥೆಯ 21 ಸ್ಥಿರಾಸ್ತಿ, ಇದರ ಮಾರುಕಟ್ಟೆ ಮೌಲ್ಯ 523 ಕೋಟಿ ರುಪಾಯಿ ಆಗಿದೆ. ಇದರಲ್ಲಿ 6 ಐಶಾರಾಮಿ ಮನೆಗಳು, 10 ಕಚೇರಿಗಳು, 2 ಫ್ಲಾಟ್ ಗಳು, ಸೋಲಾರ್ ಪವರ್ ಪ್ಲಾಂಟ್, ಅಹಮದಾಬಾದ್ ನ ಕರ್ಜಾತ್ ನಲ್ಲಿನ 135 ಎಕರೆಯ ಫಾರ್ಮ್ ಹೌಸ್ ಅನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ ನಡೆದ ದಾಳಿಯಲ್ಲಿ ನೀರವ್ ಮೋದಿಯ ದುಬಾರಿ ಕಾರುಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಇದೀಗ ನೀರವ್ ಮೋದಿ ಮತ್ತು ಆತನ ಕುಟುಂಬಕ್ಕೆ ಸಂಬಂಧಿಸಿದ ದುಬಾರಿ ವಾಚುಗಳು ಮತ್ತು ವಿದೇಶದಿಂದ ತರಿಸಿಕೊಳ್ಳಲಾಗಿದ್ದ ಅತ್ಯಮೂಲ್ಯ ಗೃಹಾಲಂಕಾರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ನಡೆದಿದ್ದ ದಾಳಿಯ ಮುಂದುವರಿದ ಭಾಗ ಇದಾಗಿದ್ದು, ಈ ವೇಳೆ ಸುಮಾರು 44 ಕೋಟಿ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics