ನವದೆಹಲಿ: ಸುಪ್ರೀಂಕೋರ್ಟಿನ ಏಳು ನ್ಯಾಯಾಧೀಶರು ಈ ವರ್ಷದಲ್ಲಿ ನಿವೃತ್ತಿಯಾಗಲಿದ್ದಾರೆ. ನಿವೃತ್ತಿಯಾಗಲಿರುವ ನ್ಯಾಯಾಧೀಶರ ಪಟ್ಟಿಯನ್ನುಸುಪ್ರೀಂಕೋರ್ಟ್ ಈಗಾಗಲೇ ಪಟ್ಟಿ ಮಾಡಿದ್ದು, ಖಾಲಿ ಇರುವ ಇಬ್ಬರು ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ನ್ಯಾಯಾಧೀಶ ಅಮಿತಾವ್ ರಾಯ್ ಮಾರ್ಚ್ 1 ರಂದು ರಾಜೇಶ್ ಅಗರ್ ವಾಲ್ ಮೇ ನಲ್ಲಿ ನಿವೃತ್ತರಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಮಿತಾವ್ ರಾಯ್ ಅವರಿಗೆ ಶುಕ್ರವಾರ ಕೊನೆಯ ಸೇವಾ ದಿನವಾಗಿದೆ. ನ್ಯಾಯಾಧೀಶರಾದ ಜೆ. ಚಲಮೇಶ್ವರ್, ಜೂನ್ 22 ರಂದು ನಿವೃತ್ತಿಯಾಗಲಿದ್ದಾರೆ. ಅದರ್ಶ್ ಗೋಯೆಲ್ ಜುಲೈ 6. ದೀಪಕ್ ಮಿಶ್ರಾ ಅಕ್ಬೋಬರ್ 2 ರಂದು, ಜಸ್ಟೀನ್ ಕುರಿಯನ್ ಜೋಸೆಪ್ ನವೆಂಬರ್ 29 ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.
ನ್ಯಾಯಾಧೀಶರಾದ ಮದನ್ ಬಿ ಲೋಕೂರ್ ಡಿಸೆಂಬರ್ 30 ರಂದು ನಿವೃತ್ತಿಯಾಗಲಿದ್ದು, ಖಾಲಿಯಾಗುವ ನ್ಯಾಯಾಧೀಶರ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ಸಂಬಂಧ ನಾಮನಿರ್ದೇಶಿತ ವಕೀಲರ ಪಟ್ಟಿಯೊಂದನ್ನು ಕೊಲಿಜಿಯಂ ಸರ್ಕಾರಕ್ಕೆ ಸಲ್ಲಿಸಿದೆ.