ಉದಯಪುರ(ರಾಜಸ್ಥಾನ): ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯ ಮಾಜಿ ಸಂಸದ ಭಾನು ಕುಮಾರ ಶಾಸ್ತ್ರಿ (93) ರಾಜಸ್ಥಾನದ ಉದಯಪುರದಲ್ಲಿ ವಿಧಿವಶರಾಗಿದ್ದಾರೆ.
ಖಾದಿ ಮಂಡಳಿಯ ಅಧ್ಯಕ್ಷರಾಗಿದ್ದ ಶಾಸ್ತ್ರಿ ಉದಯಪುರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ರಾಜಾಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಶಾಸ್ತ್ರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಶಾಸ್ತ್ರಿ ನಿಧನದ ಸುದ್ದಿ ತಿಳಿದು ನನಗೆ ಆಘಾತವಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಅವರ ಕುಟುಂಬಕ್ಕೆ ಅವರ ನಿಧನದ ದುಃಖ ಭರಿಸುವ ಶಕ್ತಿ ಸಿಗಲೆಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ." ಅವರು ಹೇಳಿದ್ದಾರೆ.
ರಾಜಾಸ್ಥಾನ ಬಿಜೆಪಿ ಮುಖಂಡ ಅಶೋಕ್ ಪರ್ನಾಮಿ ಸಹ ಭಾನು ಕುಮಾರ ಶಾಸ್ತ್ರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶಾಸ್ತ್ರಿ ಯವರ ಅಂತ್ಯಕ್ರಿಯೆಯು ಉದಯಪುರದ ಅಶೋಕ ನಗರ ಸ್ಮಶಾನದಲ್ಲಿ ಸಕಲ ಗಣ್ಯರ ಸಮ್ಮುಖದಲ್ಲಿ ನೆರವೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics