ದೇಶ

ಆಂಧ್ರಪ್ರದೇಶದಲ್ಲಿ 55,000 ಕೋಟಿ ರೂಪಾಯಿ ಹೂಡಿಕೆ ಮಾಡಲಿರುವ ಆರ್ ಐಎಲ್

Srinivas Rao BV
ವಿಶಾಖಪಟ್ಟಣಂ: ರಿಲಾಯನ್ಸ್ ಇಂಡಸ್ಟ್ರೀಸ್ ಆಂಧ್ರಪ್ರದೇಶದಲ್ಲಿ ಡಿಜಿಟಲ್ ಹಾಗೂ ಇಂಧನ ಕ್ಷೇತ್ರದಲ್ಲಿ ಸುಮಾರು 55,000 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡಲಿದೆ. 
ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಸಂಸ್ಥೆ ಆಂಧ್ರಪ್ರದೇಶ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 
ರಿಲಾಯನ್ಸ್ ನ ಸಹಭಾಗಿತ್ವ ಹೊಂದಿರುವ ಇಂಡಿಯಾ ಗ್ಯಾಸ್ ಸೊಲ್ಯೂಷನ್ಸ್ ಪ್ರೈ.ಲಿ ಹಾಗೂ ಬಿಪಿ ಇಂಟರ್ ನ್ಯಾಷನಲ್ ಲಿಮಿಟೆಡ್ ಆಂಧ್ರಪ್ರದೇಶದ ಸರ್ಕಾರದೊಂದಿಗೆ ಎಂಒಯುಗೆ ಸಹಿಹಾಕಿವೆ.
 ಆರ್ ಐಎಲ್  ಹಾಗೂ ಬಿಪಿ ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಅನಿಲ ಸಂಪನ್ಮೂಲ ಸಂಶೋಧನೆಗಳನ್ನು ಕೈಗೊಳ್ಳಲಿವೆ ಎಂದು ತಿಳಿದುಬಂದಿದೆ. 
SCROLL FOR NEXT