ದೇಶ

ಬ್ಯಾಂಕ್ ಗೆ 109 ಕೋಟಿ ವಂಚನೆ: ಪಂಜಾಬ್ ಸಿಎಂ ಅಳಿಯನ ವಿರುದ್ಧ ಕೇಸ್ ದಾಖಲಿಸಿದ ಸಿಬಿಐ

Lingaraj Badiger
ಚಂಡೀಗಢ: ಬ್ಯಾಂಕ್ ಗೆ ವಂಚಿಸಿದ ಆರೋಪದ ಮೇಲೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಳಿಯನ ವಿರುದ್ಧ ಸಿಬಿಐ ಸೋಮವಾರ ಕೇಸ್ ದಾಖಲಿಸಿದೆ.
ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ 109 ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ಪಂಜಾಬ್ ಸಿಎಂ ಅಳಿಯ ಗುರ್ಪಾಲ್ ಸಿಂಗ್  ಹಾಗೂ ಇತರೆ 12 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ದೇಶದ ಅತಿ ದೊಡ್ಡ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾದ ಸಿಂಭೌಲಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನವೆಂಬರ್ 17, 2017ರಂದು ಸಿಬಿಐಗೆ ದೂರು ಸಲ್ಲಿಸಿತ್ತು. ಆದರೆ, ಸಿಬಿಐ ಮಾಾತ್ರ ವರ್ಷ ಫೆಬ್ರವರಿ 22ರಂದು ಸಿಬಿಐ ಪ್ರಕರಣ ದಾಖಲಿಸಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಹರ್​​ಸಿಮ್ರತ್ ಕೌರ್ ಬಾದಲ್ ಅವರು, ಸ್ವತಃ ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವ ಮುಖ್ಯಮಂತ್ರಿಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಇಡೀ ಕುಟುಂಬವೇ ಹಗರಣದಲ್ಲಿ ಸಿಲುಕಿದೆ ಎಂದು ಆರೋಪಿಸಿರುವ ಅವರು, ಇದು ಅಚ್ಚರಿಯ ಬೆಳವಣಿಗೆಯಲ್ಲ. ಕಾಂಗ್ರೆಸ್​ನ ಹವ್ಯಾಸ ಎಂದು ಕಿಡಿಕಾರಿದ್ದಾರೆ.
SCROLL FOR NEXT