ದೇಶ

ಪಿಎನ್ ಬಿ ಹಗರಣದಿಂದ ಎಚ್ಚೆತ್ತ ಸರ್ಕಾರ, ಎನ್ ಪಿಎ ಪರಿಶೀಲನೆಗೆ ಸೂಚನೆ

Lingaraj Badiger
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ನ 12,600 ಕೋಟಿ ರುಪಾಯಿ ಹಗರಣದಿಂದ ಎಚ್ಚೆತ್ತುಕೊಂಡಿರುವ ಕೇಂದ್ರರ ಸರ್ಕಾರ, 50 ಕೋಟಿ ರುಪಾಯಿಗೂ ಹೆಚ್ಚಿನ ಸುಸ್ತಿ ಸಾಲ ಅಥವಾ ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ(ಎನ್​ಪಿಎ-ನಾನ್ ಪರ್ಫಾಮಿಂಗ್ ಅಸೆಟ್)ಯನ್ನು ಪರಿಶೀಲಿಸುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಮಂಗಳವಾರ ಸೂಚಿಸಿದೆ. 
15 ದಿನದೊಳಗೆ ವಂಚಿಸಬಹುದಾದ 50 ಕೋಟಿ ರುಪಾಯಿಗೂ ಹೆಚ್ಚಿನ ನಾನ್ ಪರ್ಫಾಮಿಂಗ್ ಅಸೆಟ್ ಗಳನ್ನು ಪರಿಶೀಲಿಸಿ, ಕಾರ್ಯಾಚರಣೆ ಮತ್ತು ತಾಂತ್ರಿಕ ಅಂತರವನ್ನು ಗುರುತಿಸುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ವಿತ್ತ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ತಿಳಿಸಿದ್ದಾರೆ.
ಸಾಲದ ಮೇಲಿನ ರಿಸ್ಕ್ ಕಡಿಮೆ ಮಾಡಲು ಒಂದು ನೀಲ ನಕ್ಷೆ ಸಿದ್ಧಪಡಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಹಣ ವರ್ಗಾವಣೆ ನಿಯಮ ಮತ್ತು ವಿದೇಶಿ ವಿನಿಯ ನಿರ್ವಹಣಾ ಕಾಯ್ದೆ ಉಲ್ಲಂಘಿಸಿರುವುದರ ಬಗ್ಗೆಯೂ ಪರಿಶೀಲಿಸುವಂತೆಯೂ ಸರ್ಕಾರಿ ಸ್ಮಾಮ್ಯದ ಬ್ಯಾಂಕ್ ಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ.
SCROLL FOR NEXT