ಪ್ರಧಾನಿ ನರೇಂದ್ರಮೋದಿ ವಿದೇಶ ಪ್ರಯಾಣದ (ಸಾಂದರ್ಭಿಕ ಚಿತ್ರ) 
ದೇಶ

ಏರ್ ಇಂಡಿಯಾದಲ್ಲಿ ಪ್ರಧಾನಿ ಮೋದಿ ವಿದೇಶ ಪ್ರಯಾಣದ ಬಿಲ್ ವಿವರ ಬಹಿರಂಗಪಡಿಸಿ: ಸಿಐಸಿ

ಪ್ರಧಾನಿ ನರೇಂದ್ರಮೋದಿ ವಿದೇಶ ಪ್ರಯಾಣದ ಬಿಲ್ ವಿವರ ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ , ವಿದೇಶಾಂಗ ಸಚಿವಾಲಯಕ್ಕೆ ಆದೇಶಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರಮೋದಿ 2013ರಿಂದ 2017ರವರೆಗೂ ಏರ್ ಇಂಡಿಯಾದಲ್ಲಿ  ಕೈಗೊಂಡಿದ್ದ ವಿದೇಶ ಪ್ರಯಾಣದ ಬಿಲ್ ವಿವರ ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ , ವಿದೇಶಾಂಗ ಸಚಿವಾಲಯಕ್ಕೆ  ಆದೇಶಿಸಿದೆ.

ಪ್ರಧಾನಮಂತ್ರಿಯವರ ವಿದೇಶದ ಪ್ರವಾಸ ಸಂಬಂಧ ಬಿಲ್ ವಿವಾದ ಸಂಬಂಧ  ವಿದೇಶಾಂಗ ವ್ಯವಹಾರ ಸಚಿವಾಲಯದ ವಾದವನ್ನು ಕೇಂದ್ರ ಮಾಹಿತಿ ಆಯುಕ್ತ ಆರ್. ಕೆ. ಮಥೂರ್  ತಿರಸ್ಕರಿಸಿದ್ದಾರೆ.

ನಿವೃತ್ತ ಕಮಾಂಡರ್ ಲೋಕೇಶ್ ಬಾತ್ರ , ಪ್ರಧಾನಿ ನರೇಂದ್ರಮೋದಿ 2013-14 ಮತ್ತು 2016-17ರ ಅವಧಿಯ ಮಧ್ಯೆ ಕೈಗೊಂಡಿದ್ದ ವಿದೇಶದ ಪ್ರವಾಸದ ಬಿಲ್ ವಿವರ ಮತ್ತಿತರ ಮಾಹಿತಿ ಒದಗಿಸುವಂತೆ  ಕೇಳಿದ್ದರು.

ಈ ಸಂಬಂಧ ವಿದೇಶಾಂಗ ಸಚಿವಾಲಯ  ಅಪೂರ್ಣ ಮಾಹಿತಿ ಒದಗಿಸಿದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಆಯೋಗಕ್ಕೆ ಆರ್ ಟಿ ಐ ಯಡಿ ಅರ್ಜಿ ಸಲ್ಲಿಸಿದ್ದರು.

ಸಾರ್ವಜನಿಕರಿಗೆ ಮಾಹಿತಿ ನೀಡಲು ಈ ವಿವರ ಪಡೆಯುತ್ತಿದ್ದು,ಇದನ್ನು  ನೀಡುವಲ್ಲಿ  ವಿಳಂಬವಾಗಿದೆ ಎಂದು ವಿಚಾರಣೆ ವೇಳೆ ಲೋಕೇಶ್ ಬಾತ್ರ ಹೇಳಿದ್ದರು.

ಎರಡು ಕಡೆ ವಾದ ಆಲಿಸಿದ ಮಥೂರ್, ವಿದೇಶಾಂಗ ವ್ಯವಹಾರ ಸಚಿವಾಲಯದ ವಾದ ತಿರಸ್ಕರಿಸಿ, ವಿಳಂಬವಾಗಿರುವ  ಪಾವತಿಗೆ ಬಿಲ್ ,
ಇನ್ ವಾಯ್ಸ್ ಸಂಗ್ರಹ ಅಗತ್ಯವಾಗಿದೆ. ಇವುಗಳ ಸಂಗ್ರಹದ ನಂತರ ಪಾವತಿಸಬೇಕು ಎಂದು ಹೇಳಿದ್ದಾರೆ

ಇದು ಆಯೋಗದ ನಿರ್ಧಾರ ವಾಗಿದ್ದು,ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸುವಂತೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!